‘ಫ್ರಾನ್ಸ್’ ನಲ್ಲಿ ಕಂಡು ಕೇಳರಿಯದ ಚಂಡಮಾರುತ ಅಪ್ಪಳಿಸಿದ್ದು, ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಹೌದು, ಫ್ರಾನ್ಸ್’ ನಲ್ಲಿ ರಣಚಂಡಿ ಚಿಡೋ ಚಂಡಮಾರುತ ಅಪ್ಪಳಿಸಿದ್ದು, ಹಲವು ಮನೆ, ಕಟ್ಟಡಗಳು ನೆಲಕ್ಕುರುಳಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ಸಾವಿರಾರು ಮಂದಿ ಪ್ರಾಣ ತೆತ್ತಿದ್ದಾರೆ.ಚಿಡೋ ಚಂಡಮಾರುತದಿಂದ ಸಂಭವಿಸಿದ ಸಾವಿನ ಸಂಖ್ಯೆಯ ಬಗ್ಗೆ ಕೇಳಿದಾಗ, ಫ್ರೆಂಚ್ ಆಂತರಿಕ ಸಚಿವಾಲಯವು “ಎಲ್ಲಾ ಬಲಿಪಶುಗಳನ್ನು ಲೆಕ್ಕಹಾಕುವುದು ಕಷ್ಟ” ಮತ್ತು ಈ ಹಂತದಲ್ಲಿ ಅಂಕಿಅಂಶವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಚಿಡೋ ಚಂಡಮಾರುತವು ರಾತ್ರೋರಾತ್ರಿ ಮಯೋಟ್ಟೆಗೆ ಅಪ್ಪಳಿಸಿದ್ದು, 200 ಕಿ.ಮೀ (124 ಮೈಲಿ) ವೇಗದಲ್ಲಿ ಗಾಳಿ ಬೀಸಿದ್ದು, ವಸತಿ, ಸರ್ಕಾರಿ ಕಟ್ಟಡಗಳು ಮತ್ತು ಆಸ್ಪತ್ರೆಗೆ ಹಾನಿಯಾಗಿದೆ ಎಂದು ಮೆಟಿಯೊ-ಫ್ರಾನ್ಸ್ ತಿಳಿಸಿದೆ. ಇದು 90 ವರ್ಷಗಳಲ್ಲಿ ದ್ವೀಪಗಳಿಗೆ ಅಪ್ಪಳಿಸಿದ ಪ್ರಬಲ ಚಂಡಮಾರುತವಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.