ಮಂಡ್ಯ: 3 ದಿನದ ಹಿಂದೆ ಮದುವೆ ಆಗಿದ್ದ ಯುವಕ ಹೃದಯಾಘಾತಕ್ಕೆ ಬಲಿಯಾದ ಘಟನೆ ಮಂಡ್ಯದ ಕೆ ಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.
ಮೂರು ದಿನದ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಮೈಸೂರು
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಪಟ್ಟಣದ ಶಶಾಂಕ್ (28) ಹಾರ್ಟ್ ಅಟ್ಯಾಕ್ ಗೆ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಶಶಾಂಕ್ ಜಾರ್ಖಂಡ್ ಮೂಲದ ಯುವತಿಯನ್ನು ಪ್ರೀತಿಸಿ ಕಳೆದ 3 ದಿನದ ಹಿಂದೆಯಷ್ಟೇ ಮದುವೆಯಾಗಿದ್ದನು. ಆದರೆ ವಿಧಿ ಬರಹವೇ ಬೇರೆಯಾಗಿತ್ತು. ಹೃದಯಾಘಾತದಿಂದ ಶಶಾಂಕ್ ಮೃತಪಟ್ಟಿದ್ದಾನೆ.