ಚಾಮರಾಜನಗರ : ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ಬೇಸತ್ತು ವಿದ್ಯುತ್ ಕಂಬ ಏರಿ ಯುವಕ ಪ್ರಾಣಬಿಟ್ಟ ಮನಕಲುಕುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಹೌದು, ಯುವಕನೋರ್ವ ಜಿಗುಪ್ಸೆಗೊಂಡು ವಿದ್ಯುತ್ ಕಂಬ ಏರಿ ಪ್ರಾಣಬಿಟ್ಟ ದಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಬಳಿ ನಡೆದಿದೆ. ಮನೆ ಚಿಕ್ಕದಾಗಿದೆ. ಆಸ್ತಿ ಪಾಸ್ತಿ ಇಲ್ಲ..ನನಗೆ ಯಾರು ಹೆಣ್ಣು ಕೊಡುತ್ತಾರೆ ಎಂದು ಮಸಣಶೆಟ್ಟಿ ಎಂಬ ಯುವಕ ಮನನೊಂದಿದ್ದನು ಎನ್ನಲಾಗಿದೆ. ಹುಡುಗಿ ಸಿಗದ ಹಿನ್ನೆಲೆ ಯುವಕ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ.
ಮೊದಲು ಮದ್ಯದ ಅಮಲಿನಲ್ಲಿ ಯುವಕ ವಿದ್ಯುತ್ ಕಂಬ ಏರಿದ್ದನು ಎಂದು ಹೇಳಲಾಗಿತ್ತು. ಆದರೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ಬೇಸತ್ತು ವಿದ್ಯುತ್ ಕಂಬ ಏರಿ ವಿದ್ಯುತ್ ಶಾಕ್ ಹೊಡೆದು ಯುವಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಮೃತನನ್ನು ಮಸಣಶೆಟ್ಟಿ ಎಂದು ಗುರುತಿಸಲಾಗಿದೆ. ವಿದ್ಯುತ್ ಕಂಬ ಏರಿದ್ದನ್ನು ನೋಡಿ ಅಲ್ಲಿಗೆ ಧಾವಿಸಿದ್ದ ಸ್ಥಳೀಯರು ಕಂಬದಿಂದ ಕೆಳಗಿಳಿಯುವಂತೆ ಮನವೊಲಿಸಿದ್ದಾರೆ. ಆದರೆ ವಿದ್ಯುತ್ ತಂತಿ ತಗುಲಿ ಮಸಣಶೆಟ್ಟಿ ಸಾವಿಗೀಡಾಗಿದ್ದಾನೆ.