ಮೊಟ್ಟೆಗಳು ಪ್ರೋಟೀನ್ ನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ, ಇದು ಅಗತ್ಯವಾದ ಅಮೈನೋ ಆಮ್ಲಗಳಿಂದ ತುಂಬಿದೆ, ಇದು ಸ್ನಾಯುಗಳನ್ನು ನಿರ್ಮಿಸಲು, ಅಂಗಾಂಶಗಳನ್ನು ಸರಿಪಡಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆದರೆ ಬೃಹತ್ ಪ್ರಮಾಣದ ಮೊಟ್ಟೆಗಳನ್ನು ತಿನ್ನುವುದು ದೇಹಕ್ಕೆ ಪರಿಣಾಮ ಬೀರಬಹುದೇ? ಜಪಾನ್ನ ಟೋಕಿಯೊದ ಫಿಟ್ನೆಸ್ ಉತ್ಸಾಹಿಯೊಬ್ಬರು ಕೇವಲ ಒಂದು ತಿಂಗಳಲ್ಲಿ 1,000 ಮೊಟ್ಟೆಗಳನ್ನು ಸೇವಿಸಿ ಅಚ್ಚರಿ ಮೂಡಿಸಿದ್ದಾರೆ.
ಸಾಮಾನ್ಯ ಫಿಟ್ನೆಸ್ ದಿನಚರಿಯನ್ನು ಅನುಸರಿಸುವ ಜೋಸೆಫ್ ಎವೆರೆಟ್, ದಿನಕ್ಕೆ 30 ಮೊಟ್ಟೆಗಳನ್ನು ತಿನ್ನುವುದು ಅವರ ಶಕ್ತಿ, ಸ್ನಾಯು ದ್ರವ್ಯರಾಶಿ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆಯೇ ಎಂದು ಪರೀಕ್ಷಿಸಲು ಹೊರಟರು.
ಮುಂದಾಗಿದ್ದೇನು..?
ಒಂದು ತಿಂಗಳ ನಂತರ, ಎಲ್ಲ ಪರೀಕ್ಷೆಗಳನ್ನು ಪುನರಾವರ್ತಿಸಿದಾಗ, ದೇಹದಲ್ಲಿ ಸ್ನಾಯುಗಳ ಬಲವು ಸುಮಾರು ಆರು -ಲೋಗ್ರಾಂಗಳಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ರಕ್ತದಲ್ಲಿ ಕಂಡುಬರುವ ಅಪಾಯಕಾರಿ ಕೊಬ್ಬು ಟ್ರೈಗ್ಲಿಸರೈಡ್ಗಳು ಗಮನಾರ್ಹವಾಗಿ ಕಡಿಮೆಯಾಗಿತ್ತು. ಇದು ಹೃದಯ ಕಾಯಿಲೆಗೆ ಕಾರಣವಾಗುವ ಕೊಬ್ಬು. ಟೆಸ್ಟೋಸ್ಟೆರಾನ್ ಮಟ್ಟದಲ್ಲೂ ಕೂಡ ಯಾವುದೇ ಬದಲಾವಣೆ ಆಗಿರಲಿಲ್ಲ. ದೇಹದಲ್ಲಿ ಕೆಟ್ಟ ಕೊಬ್ಬು ಹೆಚ್ಚಾಗಿರಲಿಲ್ಲ ಆದರೆ, ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗಿತ್ತು.
ಅಂದಹಾಗೆ ದಿನಕ್ಕೆ 30 ಮೊಟ್ಟೆಗಳನ್ನು ತಿನ್ನುತ್ತಿದ್ದ ಜೋಸೆಫ್ ಎವೆರೆಟ್, ನಿರಂತರವಾಗಿ ವ್ಯಾಯಾಮ ಮಾಡುತ್ತಿದ್ದರು. ಇದರಿಂದ ಅವರ ದೇಹದಲ್ಲಿ ಹೆಚ್ಚಾಗಿ ಕೊಬ್ಬು ಸಂಗ್ರಹವಾಗುತ್ತಿರಲಿಲ್ಲ.ಮೊಟ್ಟೆಗಳನ್ನು ತಿನ್ನುವುದರಿಂದ ಅವರಿಗೆ ಯಾವುದೇ ಪರಿಣಾಮ ಬೀರಿಲ್ಲ. ಇದು ಸಂಪೂರ್ಣವಾಗಿ ವೈಯಕ್ತಿಕ ಅನುಭವವಾಗಿದ್ದು, ಇತರರು ಜೋಸೆಫ್ ಅವರನ್ನು ಅನುಕರಿಸಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.