ಜಪಾನ್ ನ ಆಸ್ಪತ್ರೆಯೊಂದು ಸುಮಾರು 30 ವರ್ಷಗಳಿಂದ ತಪ್ಪಾಗಿ ಶೌಚಾಲಯದ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿದ್ದ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಸುದ್ದಿ ಕೇಳಿದ ಇಲ್ಲಿ ಚಿಕಿತ್ಸೆ ಪಡೆದ ಹಾಗೂ ಪಡೆಯುತ್ತಿದ್ದ ರೋಗಿಗಳು ದಿಗ್ಭ್ರಮೆಗೊಂಡಿದ್ದಾರೆ.
ಹೌದು, ಕಳೆದ 30 ವರ್ಷಗಳಿಂದ ಶೌಚಾಲಯ ನೀರನ್ನು ದಿನೋಪಯೋಗಿ ಕಾರ್ಯಗಳಿಗೆ ಬಳಸುತ್ತಿದ್ದರೂ ಇದುವರೆಗೂ ಆಸ್ಪತ್ರೆಯ ಆಡಳಿತ ಸಿಬ್ಬಂದಿ ಗಮನಕ್ಕೆ ಬಂದಿಲ್ಲದಿರುವುದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ತಂದಿದೆ. ಆಸ್ಪತ್ರೆಯು ಹೊಸ ಕಟ್ಟಡವನ್ನು ನಿರ್ಮಿಸಿದ ಬಳಿಕ ಆಘಾತಕಾರಿ ಮಾಹಿತಿ ಬಯಲಾಗಿದೆ.
ಆಧಾರ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ: ಆಫ್ ಲೈನ್ ನಲ್ಲೂ ಆಧಾರ್ ಪರಿಶೀಲನೆಗೆ ಅವಕಾಶ
ಒಂದು ಸಣ್ಣ ತಪ್ಪಿನಿಂದ ಸುಮಾರು 30 ವರ್ಷಗಳ ಕಾಲ ಆಕಸ್ಮಿಕವಾಗಿ ಶೌಚಾಲಯದ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿದ್ದ ಜಪಾನಿನ ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳು ಬಳಸಿದ್ದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ.
ಒಸಾಕಾ ವಿಶ್ವವಿದ್ಯಾಲಯವು ನಿರ್ದಿಷ್ಟ ಪ್ರದೇಶಗಳಲ್ಲಿ ಕೆಲವು ಟ್ಯಾಪ್ ವಾಟರ್ ಪೈಪ್‌ಗಳನ್ನು ತಪ್ಪಾಗಿ ಸ್ಥಾಪಿಸಿದೆ. ಶೌಚಾಲಯಕ್ಕೆ ಕುಡಿಯುವ ನೀರಿನ ಪೈಪ್‌ಗಳನ್ನು ಜೋಡಿಸಲಾಗಿದೆ ಎಂದು ಜಪಾನೀಸ್ ನ್ಯೂಸ್ ಔಟ್ಲೆಟ್ ಯೊಮಿಯುರಿ ಶಿಂಬುನ್ ಎಂಬ ಪತ್ರಿಕೆಯು ವರದಿ ಪ್ರಕಟಿಸಿತ್ತು. 1993 ರಲ್ಲಿ ಆಸ್ಪತ್ರೆ ಪ್ರಾರಂಭವಾದಾಗಲೇ ನೀರಿನ ಪೈಪ್ ಗಳನ್ನು ತಪ್ಪಾಗಿ ಅಳವಡಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳು, ಅಸುರಕ್ಷಿತ ನೀರಿನ ಮೂಲವನ್ನು ತಿಳಿಯದೆ ಕುಡಿದಿದ್ದಾರೆ.
ಬ್ರೈಲ್ ಸ್ನೇಹಿ ಪ್ಯಾಕ್‌ನಲ್ಲಿ ಅಸ್ಸಾಂನ ಪ್ರಸಿದ್ಧ ಚಹಾ…!
ಇನ್ನೊಂದು ಕುತೂಹಲಕಾರಿ ಅಂಶವೆಂದ್ರೆ, ಆಸ್ಪತ್ರೆಯು ವಾರಕ್ಕೊಮ್ಮೆಯಾದರೂ ನೀರಿನ ರುಚಿ, ಬಣ್ಣ ಮತ್ತು ವಾಸನೆಯನ್ನು ಪರಿಶೀಲಿಸುತ್ತದೆ ಎಂದು ವರದಿಗಳು ಹೇಳಿರುವುದು ಅಚ್ಚರಿ ತಂದಿದೆ.
ಇನ್ನು, ಇದರ ತನಿಖೆಯ ಸಮಯದಲ್ಲಿ ಯಾವುದೇ ಆರೋಗ್ಯದ ಅಪಾಯಗಳು ಕಂಡುಬಂದಿಲ್ಲ ಎಂದು ಆಸ್ಪತ್ರೆ ಹೇಳಿಕೊಂಡಿದೆ. ಆದರೆ, ರೋಗಿಗಳು ಮತ್ತು ಸಿಬ್ಬಂದಿ ಸದಸ್ಯರಲ್ಲಿ ಆತಂಕವನ್ನು ಉಂಟುಮಾಡಿದ್ದಕ್ಕಾಗಿ ಆಸ್ಪತ್ರೆ ನಿರ್ದೇಶಕ ಮತ್ತು ಉಪಾಧ್ಯಕ್ಷ ಕಝುಹಿಕೊ ನಕಾಟಾನಿ ಅವರು ಕ್ಷಮೆಯಾಚಿಸಿದ್ದಾರೆ.