alex Certify SHOCKING : ಬೆಂಗಳೂರಲ್ಲಿ ಭಯಾನಕ ಕೃತ್ಯ : ತೆಂಗಿನಕಾಯಿ ಕದಿಯಲು ಬಂದಿದ್ದ ವ್ಯಕ್ತಿಯನ್ನು ಹೊಡೆದು ಕೊಂದ ಮಾಲೀಕ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಬೆಂಗಳೂರಲ್ಲಿ ಭಯಾನಕ ಕೃತ್ಯ : ತೆಂಗಿನಕಾಯಿ ಕದಿಯಲು ಬಂದಿದ್ದ ವ್ಯಕ್ತಿಯನ್ನು ಹೊಡೆದು ಕೊಂದ ಮಾಲೀಕ.!

ಬೆಂಗಳೂರು : ತೆಂಗಿನಕಾಯಿ ಕದಿಯಲು ಬಂದಿದ್ದ ವ್ಯಕ್ತಿಯನ್ನು ಮಾಲೀಕ ಹೊಡೆದು ಕೊಂದು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿದ್ದರಾಜು ಎಂಬ ವ್ಯಕ್ತಿ ತೆಂಗಿನನಾಯಿ ಕದಿಯಲು ಮಂಜುನಾಥ್ ಎಂಬಾತನ ತೋಟಕ್ಕೆ ಹೋಗಿದ್ದು , ಮಂಜುನಾಥ್ ದೊಣ್ಣೆಯಿಂದ ಸಿದ್ದರಾಜು ಮೇಲೆ ಹಲ್ಲೆ ನಡೆಸಿದ್ದಾನೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದರಾಜು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಬಂದ ಪತ್ನಿ ಸಿದ್ದರಾಜುನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...