ಬೆಂಗಳೂರು : ಬೆಂಗಳೂರಲ್ಲಿ ದರೋಡೆ ಗ್ಯಾಂಗ್ ಒಂದು ವಿಕೃತಿ ಮೆರೆದಿದ್ದು, ಹಣಕ್ಕಾಗಿ ಯುವಕನನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿದ ಘಟನೆ ಹೊಸೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆ ಅನೇಕಲ್ ‘ ನ ಹೊಸೂರು ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.ಮುರಳಿ ಎಂಬ ಯುವಕನನ್ನು ಅಪಹರಿಸಿದ ಗ್ಯಾಂಗ್ ಗಾಂಜಾ ಸೇದುತ್ತಾ ಯುವಕನ ಮೇಲೆ ಹಲ್ಲೆ ನಡೆಸಿದೆ. ಫೋನ್ ಫೇ ಮೂಲಕ ಹಣ ಕಳುಹಿಸುವಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದೆ. ಮೈ ತುಂಬಾ ಪೆನ್ನಿನಿಂದ ಚುಚ್ಚಿ ಗಾಯಗೊಳಿಸಲಾಗಿದೆ. ಯುವಕನ ದೇಹದ ಮೇಲೆ ಬಾಸುಂಡೆ, ಗಾಯದ ಗುರುತುಗಳಾಗಿದೆ.
ಬಳಿಕ ಸ್ಥಳೀಯರ ಸಹಾಯದಿಂದ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬೆಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.