ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಕಿಡ್ನ್ಯಾಪ್ ಪ್ರಕರಣವೊಂದು ನಡೆದಿದ್ದು, ಮಹಿಳೆಯನ್ನು ಕೂಡಿ ಹಾಕಿ ಕಣ್ಣುಗುಡ್ಡೆ ಕಿತ್ತು ಚಿತ್ರಹಿಂಸೆ ನೀಡಿದ ಭಯಾನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಗನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.
ತೋಟದ ಮನೆಯಲ್ಲಿ ಮಹಿಳೆಯನ್ನು ಕೂಡಿಹಾಕಿ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಬ್ಯಾಟ್, ರಾಡ್ ಗಳಿಂದ ಮುಖಕ್ಕೆ ಹೊಡೆದು ಹಲ್ಲೆ ನಡೆಸಲಾಗಿದೆ. ಈ ಘಟನೆ ಗುಡಿಬಂಡೆ ತಾಲೂಕಿನ ಜಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಗಂಗರಾಜು ಎಂಬುವವರ 2 ನೇ ಪತ್ನಿ ಸಂಗೀತ ಮೇಲೆ ಹಲ್ಲೆ ನಡೆದಿದೆ. ಮೊದಲು ಹೆಂಡತಿ ಕಡೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಸಂಗೀತ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ 3 ತಿಂಗಳ ಹಿಂದೆ ಸಂಗೀತಾ ಅವರನ್ನು ಗಂಗರಾಜು 2 ನೇ ಮದುವೆ ಆಗಿದ್ದರು. ನಿನ್ನೆ ರಾತ್ರಿ ಈ ಗಲಾಟೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.