ಕೊಡಗು : ವಸತಿ ಶಾಲೆಯಲ್ಲಿ ಏಕಾಏಕಿ ಕುಸಿದುಬಿದ್ದು 7 ನೇ ತರಗತಿ ಬಾಲಕಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕ್ಯಾತೆ ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ ಪೂರ್ವಿಕಾ ಎಂಬ ಬಾಲಕಿ ನಿನ್ನೆ ಏಕಾಏಕಿ ಕುಸಿದು ಬಿದ್ದಿದ್ದಾಳೆ . ಕೂಡಲೇ ಶಿಕ್ಷಕರು ಕೂಡ್ಲಿಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ನಂತರದ ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.
ಬಾಲಕಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶವವನ್ನು ಸದ್ಯ ಶವಾಗಾರದಲ್ಲಿಡಲಾಗಿದೆ. ಬಾಲಕಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇತ್ತಾ..? ವಸತಿ ಶಾಲೆಯಲ್ಲಿ ಏನಾದರೂ ಸಂಭವಿಸಿತ್ತಾ..? ಯಾವುದು ಕೂಡ ತನಿಖೆಯಿಂದಷ್ಟೇ ಹೊರಬರಬೇಕಿದೆ.