ವಿದಿಶಾ (ಮಧ್ಯಪ್ರದೇಶ) : ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು 23 ವರ್ಷದ ಯುವತಿ ಸಾವನ್ನಪ್ಪಿದ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುವಾಗ 23 ವರ್ಷದ ಯುವತಿ ಸಾವನ್ನಪ್ಪಿದ್ದಾರೆ. ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ವೀಡಿಯೊ ಮೂಲಕ ಈ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಇಂದೋರ್ ನಿವಾಸಿ ಪರಿಣಿತಾ (23) ಎಂದು ಗುರುತಿಸಲಾಗಿದ್ದು, ಅವರು ತಮ್ಮ ಸೋದರಸಂಬಂಧಿ ಮದುವೆಯಲ್ಲಿ ಭಾಗವಹಿಸಲು ವಿದಿಶಾಗೆ ತೆರಳಿದ್ದರು.
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಕ್ಷಣದ ವೀಡಿಯೊ ಭಾನುವಾರ ಹೊರಬಂದಿದ್ದು, ಪರಿಣಿತಾ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ವೇದಿಕೆಯ ಮೇಲೆ ಕುಸಿದುಬಿದ್ದರು. ನೃತ್ಯ ಮಾಡುವಾಗ ಆಕೆಗೆ ಹೃದಯಾಘಾತವಾಗಿದ್ದು, ಇದು ವೇದಿಕೆಯಲ್ಲಿ ಹಠಾತ್ ಸಾವಿಗೆ ಕಾರಣವಾಯಿತು ಎಂದು ಶಂಕಿಸಲಾಗಿದೆ.
@vidisha @Ms_HeartAttack @vidishanews डांस करते-करते महिला अचानक गिरी, फिर नहीं उठी…हो गई मौत,हार्ट अटैक की आशंका।
डेढ़ मिनट के डांस के बाद अचानक स्टेज पर गिरी महिला हुई मौत। pic.twitter.com/NVnqPZt89k
— @durgesh IANS (@D_kumar777) February 9, 2025