ಥಾಣೆ : ಥಾಣೆಯ ಡೊಂಬಿವಲಿಯಲ್ಲಿರುವ ಬಹುಮಹಡಿ ಕಟ್ಟಡದ 13 ನೇ ಮಹಡಿಯಿಂದ ಬಿದ್ದು ಎರಡು ವರ್ಷದ ಮಗು ಬದುಕುಳಿದಿದೆ, ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ದೇವಿಚಪಾಡಾ ಪ್ರದೇಶದಲ್ಲಿ ಕಳೆದ ವಾರ ಈ ಘಟನೆ ನಡೆದಿದ್ದು, ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೀಡಿಯೊದಲ್ಲಿ, ಭವೇಶ್ ಎಂಬುವವರು ಮಗುವನ್ನು ಹಿಡಿಯಲು ಓಡುತ್ತಿರುವುದನ್ನು ನೋಡಬಹುದು. ಅವರು ಮಗುವನ್ನು ಕ್ಯಾಚ್ ಹಿಡಿಯಲು ಮುಂದಾದರೂ ಅವರ ಕೈ ತಪ್ಪಿ ಮಗು ಕೆಳಗೆ ಬಿದ್ದಿದೆ. ಅವರು ಮಗುವನ್ನು ಕ್ಯಾಚ್ ಹಿಡಿಯಲು ಮುಂದಾಗಿದ್ದರಿಂದ ನೇರವಾಗಿ ಮಗು ನೆಲಕ್ಕೆ ಬೀಳಲಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಮಗು ಪಾರಾಗಿದೆ. “ಅವಳು ಕಾಲು ಜಾರಿ ಬಾಲ್ಕನಿಯ ಅಂಚಿನಲ್ಲಿ ಸ್ವಲ್ಪ ಸಮಯದವರೆಗೆ ಅನೇತಾಡುತ್ತಿದ್ದಳು ಮತ್ತು ನಂತರ ಬಿದ್ದಳು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
#Thane: A two-year-old child survived a fall from the 13th-floor flat of a high-rise in #Dombivali in Thane thanks to the alertness of a man, with a video of the act going viral on social media and drawing widespread praise from netizens who hailed him as a real-life hero. pic.twitter.com/jHO3QjpraI
— Daily News India (@DNI_official_X) January 27, 2025
;