
ವಿಡಿಯೋದಲ್ಲಿ ಕಂಡು ಬರುವಂತೆ ಕಚೇರಿಯೊಂದಕ್ಕೆ ಯುವತಿ ತನ್ನ ಕೆಲಸಕ್ಕೆ ಆಗಮಿಸಿದ್ದು, ಅದರಲ್ಲಿಯೇ ಮಗ್ನಳಾಗಿರುತ್ತಾಳೆ. ಆಕೆಯ ಹಿಂದೆ ವೃದ್ಧನೊಬ್ಬ ನಿಂತಿದ್ದು, ತನ್ನ ಹೀನ ಕೃತ್ಯಕ್ಕೆ ಮುಂದಾಗಿದ್ದಾನೆ. ಮೆತ್ತಗೆ ಯುವತಿ ಕೂದಲನ್ನು ಹಿಡಿದು ಎಳೆಯುವುದು, ಕೂದಲಿಗೆ ಮುತ್ತಿಕ್ಕುವುದು ಮೊದಲಾದ ನಾಚಿಕೆಗೇಡಿ ಕಾರ್ಯ ಮಾಡಿದ್ದು, ಆಕೆ ತನ್ನ ಕೆಲಸ ಕಾರ್ಯ ಮುಗಿಸಿ ಹೊರಡಲು ಮುಂದಾದಾಗ ಕುತ್ತಿಗೆಗೆ ಕೈ ಹಾಕಿದ್ದಾನೆ. ಈ ಎಲ್ಲಾ ದೃಶ್ಯಾವಳಿಗಳು ಕಚೇರಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದ ನೆಟ್ಟಿಗರು ಆತನಿಗೆ ಛೀಮಾರಿ ಹಾಕುತ್ತಿದ್ದಾರೆ. ಅಲ್ಲದೆ ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.