ಬೆಂಗಳೂರು : ಜ್ಯೂಸ್ ಎಂದು ಕಳೇನಾಶಕ ಕುಡಿದು 14 ವರ್ಷದ ಬಾಲಕಿ ಮೃತಪಟ್ಟ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನಿಧಿ (15) ಎಂದು ಗುರುತಿಸಲಾಗಿದೆ. ಪ್ರತಿನಿತ್ಯ ಬಾಲಕಿ ಅಲೊವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದರೆ ಅಲೊವೆರಾ ಜ್ಯೂಸ್ ಡಬ್ಬದಲ್ಲಿ ಹರ್ಬಿಸೈಡ್ ಎಂಬ ಕಳೆನಾಶಕ ತುಂಬಿಸಿಡಲಾಗಿತ್ತು. ಇದನ್ನು ಗಮನಿಸದೇ ಬಾಲಕಿ ಜ್ಯೂಸ್ ಎಂದು ಕಳೆನಾಶಕ ಸೇವಿಸಿದ್ದಾಳೆ. ಕೂಡಲೇ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಲೊವೆರಾ ಜ್ಯೂಸ್ ಡಬ್ಬಿ ಖಾಲಿಯಾದ ಹಿನ್ನೆಲೆ ಪೋಷಕರು ಅದಕ್ಕೆ ಕಳೆನಾಶಕ ತುಂಬಿಸಿಟ್ಟಿದ್ದರು. ಪೋಷಕರ ನಿರ್ಲಕ್ಷ್ಯಕ್ಕೆ ಬಾಲಕಿ ಮೃತಪಟ್ಟಿದ್ದಾಳೆ.