ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ 15 ಮಂದಿಯ ಹತ್ಯೆ ಮಾಡಲಾಗಿದ್ದು, ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.
ಅಮೆರಿಕದ ನ್ಯೂ ಓರ್ಲಿಯನ್ಸ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ನ್ಯೂ ಓರ್ಲಿಯನ್ಸ್ ನಲ್ಲಿ ಜನ ಸಮೂಹ ಹೊಸ ವರ್ಷಾಚರಣೆ ಪಾರ್ಟಿಯ ಸಂಭ್ರಮದಲ್ಲಿದ್ದಾಗ ಟ್ರಕ್ ನುಗ್ಗಿಸಲಾಗಿತ್ತು. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಗಾಯಗೊಂಡು ಆಸಪ್ತ್ರೆಗೆ ದಾಖಲಾಗಿದ್ದ ಐವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.ದಾಳಿ ಹಿಂದೆ ಐಸಿಸ್ ಉಗ್ರರ ಕೈವಾಡ ಇರಬಹುದು ಎನ್ನುವುದು ದೃಢಪಟ್ಟಿದೆ. ಟ್ರಕ್ ನಲ್ಲಿ ಐಸಿಸ್ ಧ್ವಜ, ಸ್ಪೋಟಕ ಸೇರಿ ಅನೇಕ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ದಾಳಿಯಲ್ಲಿ ಐಸಿಸ್ ಕೈವಾಡ ಇರುವ ಬಗ್ಗೆ ಅಮೆರಿಕ ಸಂಸ್ಥೆಗಳು ಮಾಹಿತಿ ನೀಡಿವೆ.
ಎಫ್ಬಿಐ ದಾಳಿಯನ್ನು ಭಯೋತ್ಪಾದಕ ಕೃತ್ಯವೆಂದು ತನಿಖೆ ನಡೆಸುತ್ತಿದೆ. ಲೂಸಿಯಾನ ಸ್ಟೇಟ್ ಪೋಲೀಸ್ ಗುಪ್ತಚರ ಬುಲೆಟಿನ್ ಪ್ರಕಾರ, ಎರಡು ಪೈಪ್ ಬಾಂಬ್ಗಳನ್ನು ಕೂಲರ್ ಗಳಲ್ಲಿ ಮರೆಮಾಡಲಾಗಿತ್ತು. ರಿಮೋಟ್ ಸ್ಫೋಟಕ್ಕಾಗಿ ತಂತಿಗಳನ್ನು ಒಳಗೊಂಡಂತೆ ಅನೇಕ ಸುಧಾರಿತ ಸ್ಫೋಟಕ ಸಾಧನಗಳು ಸಿಕ್ಕಿವೆ.
Shamsud Din Jabbar was able to plow onto Bourbon Street from Canal Street in New Orleans, in his pickup truck with an ISIS flag, because the steel barriers weren’t raised.
Government officials need to be fired and indicted for this gross incompetence.pic.twitter.com/aMHmA05aLT
— Paul A. Szypula 🇺🇸 (@Bubblebathgirl) January 1, 2025