
ಈ ಮೊದಲು ಮಂಜೂಷಾ ನಿಯೋಗಿ, ಬಿದಿಶಾ ಡೆ ಮಜುಂದಾರ್ ಹಾಗೂ ಪಲ್ಲವಿ ದೇವ್ ಆತ್ಮಹತ್ಯೆಗೆ ಶರಣಾಗಿದ್ದು, ಶನಿವಾರದಂದು ಮತ್ತೊಬ್ಬ ರೂಪದರ್ಶಿ ಸರಸ್ವತಿ ದಾಸ್ ತಮ್ಮ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸರಸ್ವತಿ ದಾಸ್ ಅವರ ಸಾವು ಮೇಲ್ನೋಟಕ್ಕೆ ಆತ್ಮಹತ್ಯೆ ಇರಬಹುದೆಂದು ಹೇಳಲಾಗಿದ್ದರೂ ಸಹ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಮೊದಲು ಆತ್ಮಹತ್ಯೆಗೆ ಶರಣಾದ ಮೂವರೊಂದಿಗೆ ಸರಸ್ವತಿ ದಾಸ್ ನಂಟು ಹೊಂದಿದ್ದರೆ ಎಂಬುದರ ಕುರಿತೂ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.