ಗ್ವಾಲಿಯರ್(ಮಧ್ಯಪ್ರದೇಶ ): ವೇಗವಾಗಿ ಬರುತ್ತಿದ್ದ ಬಸ್ಸೊಂದು ಬೈಸಿಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಭಾನುವಾರ ನಡೆದಿದೆ.ಇಡೀ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಾಯಗೊಂಡ ಬಾಲಕನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.
ಚಿಕಿತ್ಸೆ ಪಡೆಯುತ್ತಿದ್ದಾಗ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪದವ್ ಪೊಲೀಸ್ ಠಾಣೆಯ ಉಸ್ತುವಾರಿ ಸಂತೋಷ್ ಸಿಂಗ್ ಭದೌರಿಯಾ ಫ್ರೀ ಪ್ರೆಸ್ಗೆ ತಿಳಿಸಿದ್ದಾರೆ. ಪೊಲೀಸರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಮಾಹಿತಿಯ ಪ್ರಕಾರ, ಬಾಲಕ ಭವಿಶ್ಯ ಶನಿವಾರ ತನ್ನ ಸ್ನೇಹಿತನೊಂದಿಗೆ ಶಾಲೆಯಿಂದ ಬೈಸಿಕಲ್ ನಲ್ಲಿ ಹಿಂದಿರುಗುತ್ತಿದ್ದನು. ಭವಿಶ್ಯ ತನ್ನ ಸ್ನೇಹಿತನನ್ನು ಎಆರ್ ಪಿ ಕಾಲೋನಿ ಗೇಟ್ ಬಳಿ ಬಿಡಲು ಹೋಗುತ್ತಿದ್ದ ಎಂದು ವರದಿಯಾಗಿದೆ. ಜಂಕ್ಷನ್ನಲ್ಲಿ, ಬಸ್ ಚಾಲಕ ಪೆಟ್ರೋಲ್ ಪಂಪ್ ಕಡೆಗೆ ವೇಗವಾಗಿ ತಿರುಗುತ್ತಿದ್ದನು ಮತ್ತು ಭವಿಶ್ಯ ಕೂಡ ತಿರುವು ತೆಗೆದುಕೊಳ್ಳಲು ನಿರ್ಧರಿಸಿದ್ದಾನೆ. ಈ ವೇಳೆ ಅವಘಡ ಸಂಭವಿಸಿದೆ.
#WATCH | Gwalior: 14-Year-Old Boy Dies After
School Bus Runs Over Him#MPNews #MadhyaPradesh #GwaliorNews pic.twitter.com/ysADqlOzwy— Free Press Madhya Pradesh (@FreePressMP) November 24, 2024