
ಹೌದು, ತಮಿಳುನಾಡಿನ ಕ್ರೀಡಾಪಟು ತನ್ನ ಅಕಾಡೆಮಿಯ ಇತರ ನಾಲ್ವರು ಅಥ್ಲೀಟ್ಗಳೊಂದಿಗೆ, ಕೊಲ್ಲಂ ಜಂಕ್ಷನ್ನಲ್ಲಿ ಕಾಲ ಕಳೆಯುವಂತಾಯ್ತು. ಏಕೆಂದರೆ, ಟಿಕೆಟ್ ಕಲೆಕ್ಟರ್, ಪವಿತ್ರಾ ಅವರ ಸ್ಪರ್ಧೆಗೆ ಬಳಸುವ ಕಂಬಗಳನ್ನು ರೈಲು ಕಿಟಕಿಯ ಕಂಬಿಗಳಿಗೆ ಕಟ್ಟುವುದನ್ನು ವಿರೋಧಿಸಿದ್ದಾರೆ. ಅಲ್ಲದೆ ರೈಲಿನಿಂದ ಕೆಳಗಿಳಿಸಿ ಅಥ್ಲೀಟ್ ಗಳನ್ನು ಅವಮಾನಿಸಿದ್ದಾರೆ.
ರೈಲ್ವೆ ಸಿಬ್ಬಂದಿ ನಮ್ಮೊಂದಿಗೆ ನಡೆದುಕೊಂಡ ರೀತಿ ಅವಮಾನಕರವಾಗಿತ್ತು. ನಾವು ಕಳ್ಳತನ ಮಾಡಿ ಸಿಕ್ಕಿಬಿದ್ದಂತೆ ನಡೆದುಕೊಂಡಿದ್ದಾರೆ. ಅವರು ನಮ್ಮ ಸ್ಪರ್ಧೆಯ ಕಂಬಗಳನ್ನು ಬಿಚ್ಚಿ ನೆಲಕ್ಕೆ ಎಸೆದಿದ್ದಾರೆ. ಇತರೆ ಪ್ರಯಾಣಿಕರೆಲ್ಲರೂ ದಿಟ್ಟಿಸುತ್ತಾ ನೋಡುತ್ತಿದ್ರೆ, ರೈಲ್ವೆ ಪೊಲೀಸರು ರೈಲಿನಿಂದ ಇಳಿಯಲು ಕೇಳಿಕೊಂಡ ರೀತಿ ಮುಜುಗರ ತಂದಿತು. ಅದೂ ಕೂಡ ತಾನು ರಾಷ್ಟ್ರೀಯ ಚಾಂಪಿಯನ್ ಕಿರೀಟವನ್ನು ಪಡೆದ ಕೇವಲ ಒಂದು ದಿನದ ನಂತರ ಈ ಘಟನೆ ಸಂಭವಿಸಿದ್ದು, ನಿಜಕ್ಕೂ ಬೇಸರ ತರಿಸಿತು ಎಂದು ಪವಿತ್ರಾ ತಿಳಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಬಳಸುವ ಫೈಬರ್-ಗ್ಲಾಸ್ ಕಂಬಗಳು ಮೂರರಿಂದ ಐದು ಮೀಟರ್ ಉದ್ದವಿರಬಹುದು. ಬುಧವಾರದ ಈ ಘಟನೆ ನಡೆದಿದ್ದು, ರಾಷ್ಟ್ರೀಯ ದಾಖಲೆ ಹೊಂದಿರುವ ಸುಬ್ರಮಣಿ ಶಿವ ಸೇರಿದಂತೆ ಹಿರಿಯ ಅಥ್ಲೀಟ್ಗಳನ್ನು ಇದು ಕೆರಳಿಸಿದೆ.
ಘಟನೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ನಂತರ, ರೈಲ್ವೇ ಇಲಾಖೆಯು ರೈಲು ಚಾಲನೆಯಲ್ಲಿ ಸಿಗ್ನಲಿಂಗ್ ಪೋಸ್ಟ್ ಅಥವಾ ಸಂಭವನೀಯ ಅಪಾಯದ ಕಾರಣದಿಂದ ಟಿಕೆಟ್ ಕಲೆಕ್ಟರ್ ಆಕ್ಷೇಪಿಸಿದ್ದಾರೆ. ಇನ್ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಅವರು ಇಲಾಖೆ ತಿಳಿಸಿದೆ.
