ವನ್ ಪ್ಲಸ್ ಮೊಬೈಲ್ ಸ್ಫೋಟವಾಗಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹರಿದಾಡ್ತಾ ಇದೆ. ಲಕ್ಷ್ಯ ವರ್ಮ ಎಂಬಾತ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈತನ ಸಹೋದರ OnePlus Nord 2 ಫೋನ್ ಬಳಸುತ್ತಿದ್ದರಂತೆ. ಫೋನ್ ನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲೇ ಅದು ಸ್ಫೋಟಗೊಂಡಿದೆ.
ಘಟನೆಯಲ್ಲಿ ಲಕ್ಷ್ಯ ಅವರ ಸಹೋದರನಿಗೆ ಅಂಗೈ ಮತ್ತು ಮುಖಕ್ಕೆ ಗಾಯವಾಗಿದೆ. ಮೊಬೈಲ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಬಗ್ಗೆ ಲಕ್ಷ್ಯ ಹಾಕಿದ ಟ್ವಿಟ್ಟರ್ ಪೋಸ್ಟ್ ಗೆ ವನ್ ಪ್ಲಸ್ ಪ್ರತಿಕ್ರಿಯಿಸಿಲ್ಲ. ಆದ್ರೆ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿಕೊಂಡಿದೆ.
ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟಗೊಂಡಿದ್ದು ಯಾಕೆ ಅನ್ನೋದು ಸ್ಪಷ್ಟವಾಗಿಲ್ಲ. ಮೊಬೈಲ್ ಯಾವ ರೀತಿ ಸುಟ್ಟು ಕರಕಲಾಗಿದೆ ಅನ್ನೋ ವಿಡಿಯೋ ಹಾಗೂ ಫೋಟೋಗಳನ್ನು ಕೂಡ ಲಕ್ಷ್ಯ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ಕಾರಣ ಏನೇ ಇದ್ದರೂ ಈ ಘಟನೆ ವನ್ ಪ್ಲಸ್ ಮೊಬೈಲ್ ಬಳಕೆದಾರರಲ್ಲಿ ಆತಂಕ ಮೂಡಿಸಿದೆ.
ವನ್ ಪ್ಲಸ್ ಮೊಬೈಲ್ ಸ್ಫೋಟವಾಗಿದ್ದು ಇದೇ ಮೊದಲೇನಲ್ಲ. 2021ರಲ್ಲಿ OnePlus Nord 2 ಮೊಬೈಲ್ ಮಾರುಕಟ್ಟೆಗೆ ಬಂದಿತ್ತು. ಸಪ್ಟೆಂಬರ್ ನಲ್ಲಿ ಒಂದು ಮೊಬೈಲ್ ಸ್ಫೋಟವಾಗಿತ್ತು. ಜೇಬಿನಲ್ಲೇ ಫೋನ್ ಬ್ಲಾಸ್ಟ್ ಆಗಿದ್ದರಿಂದ ಆತ ಆಮೇಜಾನ್ ವಿರುದ್ಧ ದೂರು ದಾಖಲಿಸಿದ್ದ. ಅದಾದ್ಮೇಲೆ ಬೆಂಗಳೂರಿನಲ್ಲೂ ಇಂಥದ್ದೇ ಘಟನೆ ವರದಿಯಾಗಿತ್ತು.
https://twitter.com/lakshayvrm/status/1509434401259950083?ref_src=twsrc%5Etfw%7Ctwcamp%5Etweetembed%7Ctwterm%5E1509439561625378818%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Ftech%2Foneplus-nord-2-user-injured-after-it-allegedly-exploded-during-a-phone-call-4935782.html