alex Certify SHOCKING: ಮಗನನ್ನೇ ಕಿಡ್ನ್ಯಾಪ್ ಮಾಡಿದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮಗನನ್ನೇ ಕಿಡ್ನ್ಯಾಪ್ ಮಾಡಿದ ತಂದೆ

ಬೆಂಗಳೂರು: ಪತಿ-ಪತ್ನಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿದೆ. ಅದರಂತೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡ ಪತಿ ಮಹಾಶಯನೊಬ್ಬ ಮಗನನ್ನೇ ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಗನನು ಕಿಡ್ನ್ಯಾಪ್ ಮಾಡಿದ್ದನ್ನು ಗಮನಿಸಿದ ಸಬ್ ಇನ್ಸ್ ಪೆಕ್ಟರ್ ಓರ್ವರು ಅವನನ್ನು ಚೇಸ್ ಮಾಡಿಕೊಂಡು ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ.

ಡ್ಯೂಟಿ ಮುಗಿಸಿ ಮನೆ ಕಡೆ ಬರುತ್ತಿದ್ದ ವಿದ್ಯಾರಣ್ಯಪುರ ಸಬ್ ಇನ್ಸ್ ಪೆಕ್ಟರ್ ಕಣ್ಣಿಗೆ ಜಿಕೆವಿಕೆ ಬಳಿ ಶಾಲೆಗೆ ಮಗುವನ್ನು ಕರೆದೊಯ್ಯುತ್ತಿದ್ದ ತಾಯಿಯನ್ನು ಮೂರು ಆಟೋಗಳು ಅಡ್ಡಗಟ್ಟಿ ತಾಯಿ ಬಳಿಯಿದ್ದ ಮಗುವನ್ನು ಎಳೆದೊಯ್ದಿರುವುದು ಕಂಡು ಬಂದಿದೆ. ತಕ್ಷಣ ಸಬ್ ಇನ್ಸ್ ಪೆಕ್ಟರ್ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಪೊಲೀಸರು ಮೂರು ಆಟೋದಲ್ಲಿ ಸಾಗುತ್ತಿದ್ದವರನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.

ಮಗುವಿನ ತಾಯಿ ಇದೊಂದು ಕಿಡ್ನ್ಯಾಪ್ ಕೇಸ್ ಎಂದು ಆರೋಪಿಸುತ್ತಿದ್ದು, ತಂದೆ – ತಾಯಿ ಬೇರೆ ಬೇರೆ ವಾಸವಾಗಿದ್ದರು. ಮಗುವಿನ ತಂದೆ ಹಾಗೂ ಆತನ ಮನೆಯವರು ಈ ರೀತಿ ಅಪಹರಣ ಮಾಡುತ್ತಿರುವುದಾಗಿ ಮಹಿಳೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋಡಿಗೆಹಳ್ಳಿ ಪೊಲೀಸರು ಮಗುವಿನ ತಂದೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: