ಜೈಪುರ: ಬ್ಲೂಟೂತ್ ಇಯರ್ ಫೋನ್ ಸ್ಪೋಟದಿಂದ ಯುವಕ ಸಾವು ಕಂಡ ಘಟನೆ ನಡೆದಿದ್ದು, ದೇಶದಲ್ಲಿಯೇ ಇದು ಮೊದಲ ಪ್ರಕರಣವೆಂದು ಹೇಳಲಾಗಿದೆ.
ರಾಜಸ್ತಾನದ ಜೈಪುರ ಜಿಲ್ಲೆಯ ಉದಯಪುರ ಗ್ರಾಮದ ಯುವಕನೊಬ್ಬ ಬ್ಲೂಟೂತ್ ಇಯರ್ ಫೋನ್ ಸ್ಪೋಟಿಸಿ ಮೃತಪಟ್ಟಿದ್ದಾನೆ. ಬ್ಲೂಟೂತ್ ಇಯರ್ ಫೋನ್ ಕಿವಿಗೆ ಹಾಕಿಕೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಅದು ಸ್ಫೋಟಗೊಂಡಿದೆ.
ಇದರಿಂದ ಯುವಕನ ಎರಡೂ ಕಿವಿಗೆ ಹಾನಿಯಾಗಿ ಆಘಾತಕ್ಕೊಳಗಾದ ಯುವಕನಿಗೆ ಹೃದಯಾಘಾತವಾಗಿದೆ. ಯುವಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಬ್ಲೂಟೂತ್ ಇಯರ್ ಫೋನ್ ಸ್ಫೋಟದ ಪರಿಣಾಮ ಆಘಾತದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.