ಜೈಪುರದ ಶಕ್ಕರ್ ಖವಾಡಾ ಎಂಬಲ್ಲಿ ತಾಯಿ ಮತ್ತು ಮಗ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೋನಾ ದೇವಿ ಎಂಬ ಮಹಿಳೆ 80 ಅಡಿ ಬಾವಿಯಿಂದ ನೀರು ಸೇದಲು ತೆರಳಿದ್ದಳು. ಈ ವೇಳೆ ಆಯತಪ್ಪಿ ಬಾವಿಗೆ ಬಿದ್ದುಬಿಟ್ಟಿದ್ದಾಳೆ.
ಆಕೆಯ ಪುತ್ರ ಗಿರಿರಾಜ್ ಅಲ್ಲೇ ಸಮೀಪದಲ್ಲಿದ್ದ. ತಾಯಿಯನ್ನು ರಕ್ಷಿಸಲು ಆತನೂ ಬಾವಿಗೆ ಹಾರಿಬಿಟ್ಟಿದ್ದಾನೆ. ಆದ್ರೆ ಗಿರಿರಾಜ್ ಗೆ ಈಜಲು ಬರುತ್ತಿರಲಿಲ್ಲ. ಇಬ್ಬರೂ ಬಾವಿಯಲ್ಲಿ ಮುಳುಗಿ ದುರಂತ ಸಾವು ಕಂಡಿದ್ದಾರೆ.
ಅಲ್ಲೇ ಹತ್ತಿರದ ಹೊಲದಲ್ಲಿ ಕೆಲಸ ಮಾಡ್ತಾ ಇದ್ದ ಗ್ರಾಮಸ್ಥರು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದಾರೆ. ತಾಯಿ – ಮಗನನ್ನು ಬದುಕಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದ್ರೆ ಸಾಧ್ಯವಾಗಲೇ ಇಲ್ಲ.
ಸೋನಾ ದೇವಿಯ ಮನೆಯಿಂದ 500 ಮೀಟರ್ ದೂರದಲ್ಲಿ ಈ ಬಾವಿ ಇದೆ. ಆಕೆಯ ಪತಿ ಹಾಗೂ ಮಗ ಇಬ್ಬರು ಅಲ್ಲೇ ಸಮೀಪದಲ್ಲಿದ್ದ ಹೊಲದಲ್ಲಿ ಕೆಲಸ ಮಾಡುತ್ತಿದ್ರು. ಆ ಸಂದರ್ಭದಲ್ಲಿ ಸೋನಾದೇವಿ ಬಾವಿಯಿಂದ ನೀರು ಸೇದಲು ತೆರಳಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ತಾಯಿ ಹಾಗೂ ಮಗನ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.