2014ರಲ್ಲಿ ನೀವು ಟೀನೇಜ್ ನಲ್ಲಿದ್ದರೆ ಏರೋಸಾಲ್ ಅನ್ನೋ ಡೇರ್ ಬಗ್ಗೆ ನಿಮಗೆ ತಿಳಿದಿರುತ್ತದೆ. ಡಿಯೋಡ್ರಂಟ್ ಕ್ಯಾನ್ ಗಳು ಖಾಲಿಯಾಗುವವರೆಗೂ ಒಂದೇ ಬಾರಿಗೆ ನೇರವಾಗಿ ಚರ್ಮಕ್ಕೆ ಒಡೆದುಕೊಳ್ಳುವುದನ್ನ ಏರೋಸಾಲ್ ಚಾಲೆಂಜ್ ಎಂದು ಕರೆಯುತ್ತಿದ್ದರು. ಆಗಿನ ಯುವಜನರಲ್ಲಿ ಈ ಚಾಲೆಂಜ್ ತುಂಬಾ ಜನಪ್ರಿಯವಾಗಿತ್ತು.
ಆದ್ರೆ ಈ ಚಾಲೆಂಜ್ ಮಾಡಿದ್ದ ಲಿವರ್ ಪೂಲ್ ನ ಒಬ್ಬ ಯುವಕ ತನ್ನ ಎರಡು ನಿಪ್ಪಲ್ ಗಳನ್ನು ಕಳೆದುಕೊಂಡಿದ್ದಾನೆ. ಹೆಸರು ಮುಚ್ಚಿಟ್ಟಿರುವ ಯುವಕ ಯುಕೆಯ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಏರೋಸಾಲ್ ಚಾಲೆಂಜ್ ಮಾಡಿ ತನ್ನ ನಿಪ್ಪಲ್ ಗಳನ್ನು ಕಳೆದುಕೊಂಡ ಕಥೆಯನ್ನ ಹಂಚಿಕೊಂಡಿದ್ದಾನೆ.
ಕೆಲ ವರ್ಷಗಳ ಹಿಂದೆ ಲಂಡನ್ ಶಾಲೆಯೊಂದರ ಚೇಂಜಿಂಗ್ ರೂಮ್ನಲ್ಲಿ ಹುಡುಗರ ಗುಂಪೊಂದು ಈ ಚಾಲೆಂಜ್ ಬಗ್ಗೆ ಮಾತನಾಡುತ್ತಿದ್ದರು. ಆ ಗುಂಪಿನಲ್ಲಿದ್ದ 15 ವರ್ಷದ ಹುಡುಗನೊಬ್ಬ ಚಾಲೆಂಜ್ ಸ್ವೀಕರಿಸಿ ಎರಡು ಕ್ಯಾನ್ ಲಿಂಕ್ಸ್ ಡಿಯೋಡ್ರಂಟ್ ಬಾಡಿ ಸ್ಪ್ರೇ ಅನ್ನು ತನ್ನ ನಿಪ್ಪಲ್ ಗಳ ಮೇಲೆ ಚಿಮುಕಿಸಿಕೊಂಡಿದ್ದಾನೆ. ಆಗ ಅದೇ ಗುಂಪಿನಲ್ಲಿದ್ದ ಮತ್ತೊಬ್ಬ ಹುಡುಗ ಈತನ ನಿಪ್ಪಲ್ ಗಳನ್ನ ಎಳೆದಿದ್ದಾನೆ. ಹೆಪ್ಪುಗಟ್ಟಿದ್ದ ಅವು ಪಾಪ್ ಆಗಿ ಉದುರಿ ಹೋಗಿವೆ.
ಸ್ಪ್ರೇ ಮಾಡಿಕೊಂಡಾಗ ಮೊದಲು ಚಳಿಯಾಯಿತು, ಇದ್ಯಾವ ದೊಡ್ಡ ವಿಷಯ ಅನಿಸಿತು. ಕೆಲ ಸಮಯದ ನಂತರ ಸ್ಪ್ರೇ ಮಾಡಿಕೊಂಡ ಭಾಗ ಉರಿಯಲು ಪ್ರಾರಂಭವಾಯ್ತು. ಈ ಉರಿ ಯಾವಾಗ ನಿಲ್ಲತ್ತೆ ಅನ್ನೋವಷ್ಟು ಉರಿಯುತ್ತಿತ್ತು. ನನ್ನ ಎದೆ ಭಾಗ ಸಂಪೂರ್ಣವಾಗಿ ಹೆಪ್ಪುಗಟ್ಟಿದಂತಾಗಿತ್ತು. ಆನಂತರ ಯಾರೋ ನನ್ನ ನಿಪ್ಪಲ್ ಗಳನ್ನ ಎಳೆದರು ಅವು ಉದುರಿ ಹೋದವು. ಎಂದಾದರು ನೀವು ನರಹುಲಿಯನ್ನ ನೋಡಿದ್ದೀರಾ ನನ್ನ ಎದೆ ಭಾಗ ನರಹುಲಿಯಿಂದ ಕಚ್ಚಿಸಿಕೊಂಡಂತಾಗಿತ್ತು. ತೆರೆದ ಚರ್ಮದಂತಾಗಿದ್ದ ಭಾಗದಲ್ಲಿ ತಡೆದುಕೊಳ್ಳಲಾಗದಷ್ಟು ನೋವಾಗುತ್ತಿತ್ತು ಎಂದು ಚಾಲೆಂಜ್ ಮಾಡಿ ನೋವುಂಡ ಹುಡುಗ ಹೇಳಿದ್ದಾನೆ.
ಈಗ ನಾನು ಜರ್ಮನ್ ನಲ್ಲಿದ್ದೇನೆ, ನಾನು ನೆಮ್ಮದಿಯಾಗಿದ್ದರೂ ನಿಪ್ಪಲ್ ಇಲ್ಲ ಅನ್ನೋ ಯೋಚನೆ ಇದ್ದೆ ಇದೆ. ನಾನು ಚಾಲೆಂಜ್ ಮಾಡಿ ಮೂರ್ಖನಾದೆ. ನನಗೆ ನಿಪ್ಪಲ್ ಇಲ್ಲ ಎಂದು ಕೇಳುವ ಜನರು ನಗುತ್ತಾರೆ. ನನ್ನ ಮೊದಲ ಗರ್ಲ್ ಫ್ರೆಂಡ್ ಕೂಡ ಈ ವಿಷಯದ ತಮಾಷೆ ಮಾಡುತ್ತಿದ್ದಳು. ನಿಮ್ಮಲ್ಲೂ ಈ ಥರದ ಹುಚ್ಚು ಯೋಚನೆಗಳು ಬರದಂತೆ ನೋಡಿಕೊಳ್ಳಿ ಎಂದು ಹರಿಹರೆಯದವರಿಗೆ ಅವರು ಎಚ್ಚರಿಕೆ ನೀಡಿದ್ದಾರೆ.