ಕಳೆದ ತಿಂಗಳು ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇದುವರೆಗೆ ಒಟ್ಟು 7 ಆರೋಪಿಗಳನ್ನು ಬಂಧಿಸಿದೆ. ಈ ಮಧ್ಯೆ ಘಟನೆಗೆ ಸಂಬಂಧಪಟ್ಟಂತೆ ಇನ್ನಷ್ಟು ಆಘಾತಕಾರಿ ಸಂಗತಿಗಳು ಬಯಲಾಗಿವೆ. 6 ಜಿಲ್ಲೆಗಳಲ್ಲಿ ಇರುವ 40 ಕ್ಕೂ ಹೆಚ್ಚು ಮೂಲಭೂತವಾದಿಗಳು ನೂಪುರ್ ಶರ್ಮಾ ಅವರನ್ನು ಬೆಂಬಲಿಸುವವರ ಕತ್ತು ಕತ್ತರಿಸಲು ತಯಾರಿ ನಡೆಸಿದ್ದರು.
ಶಿರಚ್ಛೇದ ಮಾಡಲು ಸಜ್ಜಾಗಿದ್ದ ಇವರಿಗೆ ಪಾಕಿಸ್ತಾನದಿಂದ ಆನ್‌ಲೈನ್ ಮೂಲಕ ತರಬೇತಿ ನೀಡಲಾಗಿತ್ತು. ಆದರೆ ಕನ್ಹಯ್ಯ ಲಾಲ್ ಹಂತಕರ ವಿಡಿಯೋ ವೈರಲ್ ಆದ ಕಾರಣ ಪಾಕಿಸ್ತಾನ ರೂಪಿಸಿದ್ದ ಸಂಚು ಯಶಸ್ವಿಯಾಗಲಿಲ್ಲ. ಜೂನ್ 29ರಿಂದ್ಲೇ ಎನ್ಐಎ ಈ ಪ್ರಕರಣದ ತನಿಖೆ ಪ್ರಾರಂಭಿಸಿದೆ. ಧರ್ಮದ ಹೆಸರಲ್ಲಿ ಅಮಾಯಕರ ಕತ್ತು ಕತ್ತರಿಸುವ ನೀಚ ಕೃತ್ಯಕ್ಕೆ ಪಾಕಿಸ್ತಾನದ ಬೆಂಬಲವಿತ್ತು ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ.
ಮೂಲಗಳ ಪ್ರಕಾರ ಜಿಹಾದಿಗಳು ಶಿರಚ್ಛೇದ ಮಾಡಲು ತಯಾರಿಸಿಕೊಂಡಿದ್ದ ಪಟ್ಟಿಯಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಪ್ರತಿಯೊಬ್ಬ ವ್ಯಕ್ತಿಯ ಹೆಸರಿದೆ. ನೂಪುರ್ ಶರ್ಮಾರನ್ನು ಬೆಂಬಲಿಸಿದ್ದವರ ಪ್ರಾಣ ತೆಗೆಯಲು ಖುದ್ದು ತಾವು ಕೂಡ ಸಾಯಲು ಜಿಹಾದಿಗಳು ಸಿದ್ಧರಾಗಿದ್ದರು. ಆಡಿಯೋ, ವಿಡಿಯೋ ಚಾಟ್‌ನ ತನಿಖೆ ಮತ್ತು 10 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ತಲಾಶ್ ಮಾಡಿದಾಗ ಈ ವಿಷಯ ವಿಷಯ ಬೆಳಕಿಗೆ ಬಂದಿದೆ.
ಈ ಕೆಲಸಕ್ಕಾಗಿ ದಾವತ್-ಎ-ಇಸ್ಲಾಮಿ ಎಂಬ ಇಸ್ಲಾಮಿಕ್ ಸಂಘಟನೆಯ ಮುಖ್ಯಸ್ಥ ಆದೇಶ ಹೊರಡಿಸಿದ್ದ. ಎಲ್ಲರ ತಲೆ ಕಡಿದು ವಿಡಿಯೋ ಮಾಡಿ ಭಯ ಸೃಷ್ಟಿಸುವಂತೆ ಜಿಹಾದಿಗಳಿಗೆ ಸೂಚಿಸಿದ್ದ. ಕನ್ಹಯ್ಯಾ ಹತ್ಯೆ ಪ್ರಕರಣದಲ್ಲಿ ಬಂಧಿತನಾದ ಏಳನೇ ಆರೋಪಿ ಬಾಬ್ಲಾ ಇಂತಹ ಹಲವು ಪ್ರಮುಖ ರಹಸ್ಯಗಳನ್ನು ಬಹಿರಂಗಪಡಿಸಿದ್ದಾನೆ.