ಅಮ್ಯೂಸ್‌ಮೆಂಟ್ ಪಾರ್ಕ್ ನಲ್ಲಿ ಜೈಂಟ್ ವ್ಹೀಲ್ ರೈಡ್ ಮಾಡುತ್ತಿರುವಾಗಲೇ ಜೋಡಿಯೊಂದು ಲೈಂಗಿಕ ಕ್ರಿಯೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಹೌದು, ಓಹಿಯೋದಲ್ಲಿನ ಸೀಡರ್ ಪಾಯಿಂಟ್ ಅಮ್ಯೂಸ್‌ಮೆಂಟ್ ಪಾರ್ಕ್‌ನ ಅಧಿಕಾರಿಗಳು, 32 ವರ್ಷ ವಯಸ್ಸಿನ ಪುರುಷ ಮತ್ತು ಮಹಿಳೆ ಜೈಂಟ್ ವೀಲ್ ರೈಡ್‌ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಿ ತಿಳಿಸಿದ್ದಾರೆ. ಇಡೀ ಕ್ಷಣಕ್ಕೆ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಮಹಿಳೆಯರು ಸಾಕ್ಷಿಯಾಗಿದ್ದಾರೆ ಎನ್ನಲಾಗಿದೆ.
ಮೊದಲಿಗೆ ಜೋಡಿಯು ಲೈಂಗಿಕ ಸಂಪರ್ಕ ನಡೆಸಿಲ್ಲ ಎಂದು ಹೇಳಿದ್ದಾರೆ. ಮಹಿಳೆ ತನ್ನ ಸಿಗರೇಟ್ ಪ್ಯಾಕ್ ಅನ್ನು ಕೈಬಿಟ್ಟೆ ಮತ್ತು ಅದನ್ನು ತೆಗೆದುಕೊಳ್ಳಲು ಬಾಗಿದ್ದೆ. ಹೀಗಾಗಿ ಆತ ಪ್ಯಾಕ್ ಅನ್ನು ತೆಗೆದುಕೊಳ್ಳಲು ಸಹಾಯ ಮಾಡಿದ್ದಾಗಿ ಹೇಳಿದ್ದಾರೆ.
ಆದರೆ, ಈ ಜೋಡಿಯ ಹೇಳಿಕೆಯನ್ನು ನಿರಾಕರಿಸಿದ ಸಾಕ್ಷಿದಾರರು, ಅವರು ಬೆತ್ತಲಾಗಿದ್ದರು ಮತ್ತು ಜೈಂಟ್ ವೀಲ್ ಕಾರ್ಟ್‌ನಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು ಎಂದು ಹೇಳಿದ್ದಾಗಿ ಪೊಲೀಸ್ ವರದಿ ತಿಳಿಸಿದೆ.