alex Certify SHOCKING: ಚಲಿಸುತ್ತಿರುವ ರೈಲಿನಲ್ಲಿ ಗನ್ ತೋರಿಸಿ ಪ್ರಯಾಣಿಕರ ಲೂಟಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಚಲಿಸುತ್ತಿರುವ ರೈಲಿನಲ್ಲಿ ಗನ್ ತೋರಿಸಿ ಪ್ರಯಾಣಿಕರ ಲೂಟಿ….!

ಭಾನುವಾರದಂದು ದೆಹಲಿ – ಕೊಲ್ಕತ್ತಾ ಡುರಂಟೋ ಎಕ್ಸ್ ಪ್ರೆಸ್ ರೈಲಿನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿಗೆ ನುಗ್ಗಿದ 5 ರಿಂದ 6 ದುಷ್ಕರ್ಮಿಗಳಿದ್ದ ತಂಡ ಗನ್ ತೋರಿಸಿ ಪ್ರಯಾಣಿಕರಿಂದ ಹಣ, ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲಾಗಿದೆ.

ಘಟನೆ ಬೆಳಗಿನ ಜಾವ 3:00 ಗಂಟೆ ಸುಮಾರಿಗೆ ನಡೆದಿದೆ ಎನ್ನಲಾಗಿದ್ದು, ಬಿಹಾರದ ಭಕ್ತಿಯಾರ್ ಪುರ ಮೂಲಕ ಹಾದು ಹೋಗುವಾಗ ದುಷ್ಕರ್ಮಿಗಳು ಡುರಂಟೋ ಎಕ್ಸ್ ಪ್ರೆಸ್ ರೈಲಿನ ಬೋಗಿ ಏರಿದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಅಲ್ಲದೆ ಬಳಿಕ ರೈಲು ಚಲಿಸುತ್ತಿರುವಾಗಲೇ ಹಾರಿ ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಈಸ್ಟರ್ನ್ ರೈಲ್ವೆಯ ಸಿಪಿಆರ್ಓ ಬೀರೇಂದ್ರ ಕುಮಾರ್, ಪ್ರಯಾಣಿಕರು ಮಲಗಿದ್ದ ವೇಳೆ ದುಷ್ಕರ್ಮಿಗಳು ಒಳ ಪ್ರವೇಶಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಗನ್ ಬಳಸಿಲ್ಲ. ಪ್ರಯಾಣಿಕರಿಂದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...