ಬೇಸಿಗೆ ಶುರುವಾಯ್ತು ಅಂದ್ರೆ ಬಹುತೇಕ ಕಡೆಗಳಲ್ಲಿ ಎಸಿ ಇಲ್ಲದೇ ಬದುಕುವುದೇ ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಮನೆ, ಕಚೇರಿ, ಕಾರು ಎಲ್ಲಾ ಕಡೆ ಎಸಿ ಹಾಕಿಕೊಂಡು ಕೂರೋದು ಅನಿವಾರ್ಯವಾಗಿಬಿಡುತ್ತದೆ. ಜನ ಎಸಿಯಲ್ಲೇ ಇರಲು ಅಭ್ಯಾಸ ಮಾಡಿಕೊಂಡಿದ್ದಾರೆ.
ಆದರೆ ಎಸಿಯಲ್ಲಿ ಹೆಚ್ಚು ಸಮಯ ಕಳೆಯುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಎಸಿಯಲ್ಲಿ ದೀರ್ಘಕಾಲ ಉಳಿಯುವುದರಿಂದ ಸೋಂಕು, ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತವೆ. ಎಸಿಯಲ್ಲಿ ಹೆಚ್ಚು ಹೊತ್ತು ಇರುವುದರಿಂದ ಕಣ್ಣುಗಳಿಗೆ ಹಾನಿಯಾಗುತ್ತದೆ. ಎಸಿಯಲ್ಲಿದ್ದರೆ ಕಣ್ಣುಗಳು ಡ್ರೈ ಆಗಬಹುದು. ಕಣ್ಣು ಡ್ರೈ ಆದರೆ ತುರಿಕೆ ಮತ್ತು ಉರಿ ಸಹ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಡ್ರೈ ಐ ಸಿಂಡ್ರೋಮ್ ಇರುವವರು ಎಸಿಯಲ್ಲಿ ಹೆಚ್ಚು ಸಮಯ ಕಳೆಯಬಾರದು.
ಕಣ್ಣು ಮಾತ್ರವಲ್ಲ ಎಸಿಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ತ್ವಚೆ ಕೂಡ ಒಣಗಿ ಹೋಗುತ್ತದೆ. ಇದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಎಸಿಯಲ್ಲಿರುವ ಕಾರಣ ಚರ್ಮ ಹೆಚ್ಚು ಒಣಗಿ ತುರಿಕೆ ಉಂಟಾಗುತ್ತದೆ. ಚರ್ಮದ ಮೇಲೆ ಬಿಳಿ ಕಲೆಗಳು ಮತ್ತು ತುರಿಕೆಗೆ ಕಾರಣವಾಗಬಹುದು. ACಯಲ್ಲಿ ದೀರ್ಘಕಾಲ ಉಳಿಯುವುದು ನಿಮಗೆ ಶಾಖದಿಂದ ಪರಿಹಾರವನ್ನು ನೀಡುತ್ತದೆ, ಆದರೆ ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
ಸಾಮಾನ್ಯ ಕೊಠಡಿಗಳಿಗಿಂತ ಎಸಿ ಕೊಠಡಿಗಳಲ್ಲಿ ಡಿಹೈಡ್ರೇಶನ್ ಸಮಸ್ಯೆ ಹೆಚ್ಚು. ಎಸಿ ಕೋಣೆಯಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ, ಇದರಿಂದ ಡಿಹೈಡ್ರೇಶನ್ ಉಂಟಾಗುತ್ತದೆ. ಎಸಿಯನ್ನು ಅತಿಯಾಗಿ ಬಳಸುವುದರಿಂದ ಉಸಿರಾಟದ ಸಮಸ್ಯೆಯೂ ಶುರುವಾಗುತ್ತದೆ. ಎಸಿಯಲ್ಲಿ ಇದ್ದರೆ ಗಂಟಲು ಒಣಗುತ್ತದೆ, ಮೂಗು ಸೋರುವಿಕೆ ಮತ್ತು ಮೂಗು ಕಟ್ಟಿಕೊಳ್ಳುತ್ತದೆ. ಇದು ಮೂಗಿನ ಲೋಳೆಯ ಪೊರೆಯ ಊತಕ್ಕೂ ಕಾರಣವಾಗಬಹುದು.
ಎಸಿಯಿಂದ ತಲೆನೋವು, ಮೈಗ್ರೇನ್ ನಂತಹ ಸಮಸ್ಯೆಗಳೂ ಬರಬಹುದು. ಡಿಹೈಡ್ರೇಶನ್‌ನಿಂದ್ಲೇ ಮೈಗ್ರೇನ್ ಬರುವ ಸಾಧ್ಯತೆ ಹೆಚ್ಚು. ನೀವು ಹೊರಗಿನ ಶಾಖದಿಂದ ಎಸಿ ರೂಮ್‌ಗೆ ಕಾಲಿಟ್ಟಾಗ ಅಥವಾ ಎಸಿ ರೂಮ್‌ನಿಂದ ಹೊರಗೆ ಹೋದಾಗ, ನಿಮಗೆ ಈ ಸಮಸ್ಯೆ ಎದುರಾಗಬಹುದು.