
ರಾಯಲ್ ಕಾಲೇಜ್ ಆಫ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಕನ್ಯತ್ವ ಪೊರೆ ಜೋಡಣೆ ಶಸ್ತ್ರಚಿಕಿತ್ಸೆ ಮೇಲೆ ಕಟ್ಟುನಿಟ್ಟಾಗಿ ನಿಷೇಧ ಹೇರಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗಳು ನಡೆಸುವ ಕನ್ಯತ್ವ ಪರೀಕ್ಷೆಯನ್ನು ಅಪರಾಧ ಶ್ರೇಣಿಯಲ್ಲಿ ಸೇರಿಸುವಂತೆ ಕಳೆದ ತಿಂಗಳು ಸಂಸತ್ ಸಮಿತಿ ಹೇಳಿತ್ತು.
ಒಂದು ಕಡೆ ಕನ್ಯತ್ವ ಪರೀಕ್ಷೆ ಬ್ಯಾನ್ ಮಾಡುವುದಾಗಿ ಸರ್ಕಾರ ಹೇಳ್ತಿದೆ. ಆದ್ರೆ ಇನ್ನೊಂದು ಕಡೆ ಕನ್ಯತ್ವ ಶಸ್ತ್ರಚಿಕಿತ್ಸೆ ನಿರಂತರವಾಗಿ ನಡೆಯುತ್ತಿದೆ. ಇದನ್ನು ಹೈಮೋನೊಪ್ಲ್ಯಾಸ್ಟಿ ಎಂದು ಕರೆಯುತ್ತಾರೆ.
ಯುಕೆಯಲ್ಲಿ ಹುಡುಗಿಯರು ಕನ್ಯೆಯರೆಂದು ಸಾಬೀತುಪಡಿಸಲು ಇಲ್ಲಿ ಹೈಮೋನೊಪ್ಲ್ಯಾಸ್ಟಿ ನಡೆಯುತ್ತಿದೆ. ಶೇಕಡಾ 20ರಷ್ಟು ಆಸ್ಪತ್ರೆಗಳು ಕನ್ಯತ್ವ ದುರಸ್ಥಿ ಶಸ್ತ್ರಚಿಕಿತ್ಸೆ ಹೆಸರಿನಲ್ಲಿ ಹೆಚ್ಚಿನ ಹಣ ಮಾಡ್ತಿವೆ ಎಂಬುದು 2020ರಲ್ಲಿ ಗೊತ್ತಾಗಿದೆ. 9 ಸಾವಿರಕ್ಕೂ ಹೆಚ್ಚು ಮಂದಿ ಒಂದು ವರ್ಷದಲ್ಲಿ ಈ ವಿಷ್ಯದ ಬಗ್ಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದ್ದಾರೆ.
ಕನ್ಯತ್ವ ಪರೀಕ್ಷೆ ಹಾಗೂ ಹೈಮೋನೊಪ್ಲ್ಯಾಸ್ಟಿ ಎರಡನ್ನೂ ನಿಷೇಧಿಸಬೇಕೆಂದು ಆರ್ಸಿಓಜಿ ಹೇಳಿದೆ. ಹೈಮೋನೊಪ್ಲ್ಯಾಸ್ಟಿ, ಮಹಿಳೆಯರ ಮೇಲೆ ನಡೆಯುವ ಹಿಂಸೆ. ಇದು ಅಪಾಯಕ್ಕೆ ಕಾರಣವಾಗಬಹುದು ಎಂದು ಅದು ಹೇಳಿದೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ವೇಳೆ ಬ್ಲೀಡಿಂಗ್ ಆಗುತ್ತೆ ಎಂಬುದು ಸುಳ್ಳು. ಸೆಕ್ಸ್ ನಿಂದ ಮಾತ್ರ ಕನ್ಯತ್ವ ಹೋಗುವುದಿಲ್ಲ. ಸೈಕಲ್ ಸೇರಿದಂತೆ ಬೇರೆ ಕ್ರೀಡೆಗಳಿಂದಲೂ ಪೊರೆ ಹರಿಯುತ್ತದೆ ಎಂದು ಡಬ್ಲ್ಯು ಎಚ್ ಒ ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳು ಈ ವಿಷ್ಯವನ್ನು ಹೇಳಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳು ತನ್ನ ನೋವು ತೋಡಿಕೊಂಡಿದ್ದಳು. ನನ್ನನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದರು. ಮನೆಗೆ ಬಂದ್ಮೇಲೆ ತಾಯಿ, ಬ್ಲೀಡಿಂಗ್ ಆಗಿದೆಯಾ ಎಂದು ಕೇಳಿದ್ದಳು.
ಇಲ್ಲ ಎಂದಾಗ, ನೀನು ಈಗಾಗಲೇ ಶಾರೀರಿಕ ಸಂಬಂಧ ಬೆಳೆಸಿದ್ದೀಯಾ ಎಂದು ಹಿಂಸೆ ನೀಡಿದ್ದರಂತೆ. ಅಷ್ಟೇ ಅಲ್ಲ ಮದುವೆಯಾಗುವ ಮೊದಲು ಕನ್ಯತ್ವ ಚಿಕಿತ್ಸೆಗೆ ಒಳಗಾಗುವಂತೆ ಹೇಳಿದ್ದರಂತೆ. ಆದ್ರೆ ಇದಕ್ಕೆ ಒಪ್ಪದ ಹುಡುಗಿ, ಕದ್ದು ಮದುವೆಯಾಗಿದ್ದಾಳಂತೆ. ಆಕೆ ತಂದೆ, ಈಗ್ಲೂ ಆಕೆಯನ್ನು ಮಾತನಾಡಿಸುವುದಿಲ್ಲವಂತೆ.