ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೆಬ್ ಸೈಟ್ ಅನ್ನು ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಅದನ್ನು ಈಗ ಸರಿಪಡಿಸಲಾಗಿದೆ.
ಆದರೆ ಇದರ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ಸಂಸ್ಥೆ ಭಾರತೀಯ ವೈದ್ಯಕೀಯ ವಿಜ್ಞಾನ ಮಂಡಳಿ (ಐಸಿಎಂಆರ್) ವೆಬ್ ಸೈಟ್ ಗೂ ಕನ್ನ ಹಾಕಲು ಹ್ಯಾಕರ್ ಗಳು ಪ್ರಯತ್ನ ನಡೆಸಿದ್ದರು ಎಂಬ ಸಂಗತಿ ಈಗ ಬಹಿರಂಗವಾಗಿದೆ.
ಹಾಂಕಾಂಗ್ ನಿಂದ ಈ ಯತ್ನ ನಡೆದಿದೆ ಎಂದು ಹೇಳಲಾಗಿದ್ದು, ನವೆಂಬರ್ 30ರಂದು ಬರೋಬ್ಬರಿ 6,000 ಬಾರಿ ಇದಕ್ಕಾಗಿ ಪ್ರಯತ್ನಿಸಲಾಗಿದೆ. ಆದರೆ ಅತ್ಯುನ್ನತ ತಂತ್ರಜ್ಞಾನ ಅಳವಡಿಸಿಕೊಂಡಿರುವ ಕಾರಣ ಹ್ಯಾಕರ್ ಗಳು ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ.