ಹ್ಯಾಕರ್ಗಳು ವಿಶ್ವದ ಪ್ರಮುಖ ಕಂಪನಿಗಳ ಡೇಟಾ ಸೆಂಟರ್ಗಳ ಲಾಗಿನ್ ಪಾಸ್ವರ್ಡ್ಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಹ್ಯಾಕರ್ಗಳು ಅಲಿಬಾಬಾ, ಅಮೆಜಾನ್, ಆಪಲ್, ಬಿಎಂಡಬ್ಲ್ಯು ಎಜಿ, ಮೈಕ್ರೋಸಾಫ್ಟ್ ಮತ್ತು ವಾಲ್ಮಾರ್ಟ್ನಂತಹ ಕಂಪನಿಗಳ ಡೇಟಾ ಸೆಂಟರ್ಗಳ ಲಾಗಿನ್ ಪಾಸ್ವರ್ಡ್ಗಳಿಗೆ ಸಂಬಂಧಿಸಿದ ಡೇಟಾವನ್ನು ಹ್ಯಾಕ್ ಮಾಡುತ್ತಿದ್ದಾರೆ.
ಭಾರತಿ ಏರ್ಟೆಲ್ ಮತ್ತು ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ ಸೇರಿದಂತೆ ಭಾರತೀಯ ಕಂಪನಿಗಳ ರಹಸ್ಯ ಕೂಡ ಹ್ಯಾಕರ್ಗಳ ಕೈಸೇರುತ್ತಿದೆ. ಅಮೆರಿಕದ ಸೈಬರ್ ಭದ್ರತಾ ಸಂಶೋಧನಾ ಸಂಸ್ಥೆ Resecurity Inc ಈ ಹ್ಯಾಕರ್ಗಳು ಏಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ದೊಡ್ಡ ಡೇಟಾ ಸೆಂಟರ್ಗಳ ಲಾಗಿನ್ ಡೇಟಾಕ್ಕೆ ಕೈ ಹಾಕಿದ್ದಾರೆ ಎಂದು ಬಹಿರಂಗಪಡಿಸಿದೆ. ಇದರಲ್ಲಿ ಶಾಂಘೈ ಮೂಲದ GDS ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಸಿಂಗಾಪುರ ಮೂಲದ ST ಟೆಲಿಮೀಡಿಯಾ ಜಾಗತಿಕ ಡೇಟಾ ಕೇಂದ್ರಗಳಿವೆ.
ಜಿಡಿಎಸ್ ಹೋಲ್ಡಿಂಗ್ ಮತ್ತು ಎಸ್ಟಿ ಟೆಲಿಮೀಡಿಯಾದ 2000 ಗ್ರಾಹಕರು ಇದರಿಂದ ತೊಂದರೆಗೀಡಾಗಿದ್ದಾರೆ.ಅಲಿಬಾಬಾ ಗ್ರೂಪ್ ಹೋಲ್ಡಿಂಗ್, ಅಮೇಜಾನ್ ಡಾಟ್ ಕಾಮ್, ಆಪಲ್, BMW AG, Goldman Sachs Group, Huawei Technologies, ಮೈಕ್ರೋಸಾಫ್ಟ್, ವಾಲ್ಮಾರ್ಟ್, ಭಾರತಿ ಏರ್ಟೆಲ್, ಬ್ಲೂಮ್ಬರ್ಗ್, ಫೋರ್ಡ್ ಮೋಟರ್ಸ್, ಮಾಸ್ಟರ್ ಕಾರ್ಡ್, ಮೊರ್ಗನ್ ಸ್ಟ್ಯಾನ್ಲಿ, ಹೋಲ್ಡಿಂಗ್ಸ್ ಇನ್ಕಾರ್ಪೊರೇಟೆಡ್ ಸೇರಿದಂತೆ ಅನೇಕ ಕಂಪನಿಗಳ ಡೇಟಾ ಸೋರಿಕೆಯಾಗಿದೆ. ಹ್ಯಾಕರ್ಗಳು ಐದು ಕಂಪನಿಗಳ ಖಾತೆಗಳಿಗೆ ಲಾಗ್ ಇನ್ ಮಾಡಿದ್ದಾರೆ.
ST ಟೆಲಿಮೀಡಿಯಾದಲ್ಲಿ, ಹ್ಯಾಕರ್ಗಳು ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾದ ಖಾತೆಯನ್ನು ಪ್ರವೇಶಿಸಿದ್ದಾರೆ, ಇದು ಭಾರತದಲ್ಲಿನ ಇಂಟರ್ನೆಟ್ ಕಂಪನಿಗಳನ್ನು ಪರಸ್ಪರ ಸಂಪರ್ಕಿಸುವ ಸಂಸ್ಥೆಯಾಗಿದೆ. ಲಾಗಿನ್ ವಿವರಗಳು ಒಂದು ವರ್ಷದಿಂದ ಹ್ಯಾಕರ್ಗಳ ಬಳಿ ಲಭ್ಯವಿದ್ದು, ಕಳೆದ ತಿಂಗಳು 1,75,000 ಡಾಲರ್ಗೆ ಮಾರಾಟ ಮಾಡಲು ಡಾರ್ಕ್ ವೆಬ್ನಲ್ಲಿ ಹಾಕಿದ್ದರು.
ಹ್ಯಾಕರ್ಗಳು ಕೆಲವು ಕಂಪನಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಕಂಪನಿಗಳ ಸಂಖ್ಯೆ 2000 ಕ್ಕಿಂತ ಹೆಚ್ಚಿದೆ. ಜನವರಿ ತಿಂಗಳಲ್ಲಿ ಜಿಡಿಎಸ್ ಹೋಲ್ಡಿಂಗ್ ಮತ್ತು ಎಸ್ಟಿ ಟೆಲಿಮೀಡಿಯಾ ಗ್ರಾಹಕರ ಪಾಸ್ವರ್ಡ್ಗಳನ್ನು ಬದಲಾಯಿಸಿದ್ದವು. GDS ಹೋಲ್ಡಿಂಗ್ ತನ್ನ ಸಿಸ್ಟಮ್ಗಳನ್ನು ಉಲ್ಲಂಘಿಸುವ ಪ್ರಯತ್ನ ನಡೆದಿದೆ ಎಂದು ಒಪ್ಪಿಕೊಂಡಿತು. ಆದಾಗ್ಯೂ ಗ್ರಾಹಕರ ಐಟಿ ವ್ಯವಸ್ಥೆಗಳು ಅಥವಾ ಡೇಟಾಗೆ ಯಾವುದೇ ಅಪಾಯವಾಗಿಲ್ಲ ಎಂದು ಹೇಳಿದೆ.