alex Certify ಕುಡಿದ ಮತ್ತಿನಲ್ಲಿ ASI ಮೇಲೆ ಹಲ್ಲೆ; ‘ನಕಲಿ’ ಎಂದು ನಿಂದಿಸಿ ವಿಡಿಯೋ ಮಾಡಿದ ದುಷ್ಕರ್ಮಿ | Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಮತ್ತಿನಲ್ಲಿ ASI ಮೇಲೆ ಹಲ್ಲೆ; ‘ನಕಲಿ’ ಎಂದು ನಿಂದಿಸಿ ವಿಡಿಯೋ ಮಾಡಿದ ದುಷ್ಕರ್ಮಿ | Watch Video

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕುಡಿದ ಮತ್ತಿನಲ್ಲಿ ಉಪ-ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರ ಮೇಲೆ ಹಲ್ಲೆ ಮಾಡಿದ ಇಬ್ಬರು ವ್ಯಕ್ತಿಗಳನ್ನು ಗುರುವಾರ ಬಂಧಿಸಲಾಗಿದೆ. ಬುಧವಾರ ಕರ್ತವ್ಯದಲ್ಲಿದ್ದ ಉಪ-ಪೊಲೀಸ್ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ನಡೆದಿದ್ದು,‌ ಬಂಧಿಸಿದ ಬಳಿಕ ಆರೋಪಿಗಳನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಂಗ್‌ಗಂಗಾ ಪೊಲೀಸ್ ಠಾಣಾ ವ್ಯಾಪ್ತಿಯ ಭೋನ್ಸಲಾ ಗ್ರಾಮದಲ್ಲಿ ಉಪ-ಪೊಲೀಸ್ ಇನ್ಸ್‌ಪೆಕ್ಟರ್ ಟಿ. ಇಕ್ಕಾ ಮಂಗಳವಾರ ರಾತ್ರಿ 12 ಗಂಟೆಯಿಂದ ಬುಧವಾರ ಬೆಳಿಗ್ಗೆ 8 ಗಂಟೆಯವರೆಗೆ ಕರ್ತವ್ಯದಲ್ಲಿದ್ದರು. ಬೆಳಿಗ್ಗೆ ಸುಮಾರು 5 ಗಂಟೆಗೆ ನಾಲ್ವರು ಕುಡಿದ ಮತ್ತಿನಲ್ಲಿ ಕಾರಿನಲ್ಲಿ ಬಂದಿದ್ದು ಅವರನ್ನು “ನಕಲಿ ಪೋಲಿಸ್” ಎಂದು ನಿಂದಿಸಲು ಪ್ರಾರಂಭಿಸಿದ್ದಾರೆ. ಅಲ್ಲದೆ, ಅವರ ಬಳಿ ಇದ್ದ ವೈರ್‌ಲೆಸ್ ಸೆಟ್ ಮತ್ತು ಟೋಪಿ ಕಿತ್ತುಕೊಂಡು, ಹಲ್ಲೆ ಮಾಡುತ್ತಾ ವಿಡಿಯೋ ಮಾಡಿದ್ದಾರೆ.

ವೈರಲ್ ವಿಡಿಯೋದಲ್ಲಿ, ಕುಡಿದ ವ್ಯಕ್ತಿಗಳು ಉಪ-ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಕಾಲರ್ ಹಿಡಿದು, ಎಳೆದಾಡಿ, ಸುಳ್ಳು ಸುಳ್ಳು ಆರೋಪ ಮಾಡುತ್ತಿರುವುದು ಕಂಡುಬರುತ್ತದೆ. ಅಧಿಕಾರಿ ಸಹಾಯಕ್ಕಾಗಿ ಕರೆದರೂ ಯಾರೂ ಬರಲಿಲ್ಲ. ನಂತರ ಆರೋಪಿಗಳು ಅವರನ್ನು ಕಾರಿನಲ್ಲಿ ಬಲವಂತವಾಗಿ ಬಾಂಗ್‌ಗಂಗಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಠಾಣೆಯ ಬಳಿ ಇಬ್ಬರು ಜಿಗಿದು ಓಡಿಹೋಗಿದ್ದಾರೆ, ಆದರೆ ಪೊಲೀಸರು ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಬಾಂಗ್‌ಗಂಗಾ ಪೊಲೀಸ್ ಠಾಣೆಯ ಉಸ್ತುವಾರಿ ಸಿಯಾರಾಮ್‌ಸಿಂಗ್ ಗುರ್ಜರ್ ಅವರು, ರವಿ, ವಿಕಾಸ್ ಡಾಬಿ, ಅರವಿಂದ್ ಮತ್ತು ವಿಕಾಸ್ ಎಂಬುವವರ ವಿರುದ್ಧ ಹಲ್ಲೆ ಮತ್ತು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ರವಿ ಮತ್ತು ವಿಕಾಸ್ ಅವರನ್ನು ಬಂಧಿಸಲಾಗಿದೆ ಮತ್ತು ಇತರ ಇಬ್ಬರು ಆರೋಪಿಗಳಿಗಾಗಿ ತನಿಖೆ ನಡೆಯುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...