ಬೆಂಗಳೂರು : ಲೋಕಾಯುಕ್ತ ಐಎಸ್ ಐಟಿಯಿಂದ ಹೆಚ್ .ಡಿ ಕುಮಾರಸ್ವಾಮಿಗೆ ಶಾಕ್ ಎದುರಾಗಿದ್ದು, ಜಾಮೀನು ರದ್ದುಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ.
ಶ್ರೀ ಸಾಯಿ ಮಿನರಲ್ಸ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಹೆಚ್ಡಿಕೆಗೆ ಲೋಕಾಯುಕ್ತಗೆ ಐಎಸ್ ಐಟಿ ಶಾಕ್ ನೀಡಿದ್ದು, ಜಾಮೀನು ರದ್ದುಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ.
2006 ರಿಂದ 2008 ರ ಅವಧಿಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ಶ್ರೀ ಸಾಯಿ ವೆಂಕಟರೇಶ್ವರ ಮಿನರಲ್ಸ್ ಮೈನಿಂಗ್ ಕಂಪೆನಿಗೆ ಬಳ್ಳಾರಿಯಲ್ಲಿ ಅಕ್ರಮವಾಗಿ 550 ಎಕರೆ ಭೂಮಿ ಮಂಜೂರು ಮಾಡಿದ್ದ ಆರೋಪದಲ್ಲಿ ಕ್ರೈಂ ಕೇಸ್ ನಂ.16/14 ದಾಖಲಾಗಿದೆ. ಈ ಪ್ರಕರಣದಲ್ಲಿ ಹೆಚ್ಡಿಕೆ ಜಾಮೀನಿನ ಮೇಲೆ ಹೊರಗಿದ್ದಾರೆ. ಇದೀಗ ಎಸ್.ಐ.ಟಿ ಈ ಪ್ರಕರಣದಲ್ಲಿ ಜಾಮೀನು ರದ್ದು ಕೋರಿ ಕೋರ್ಟ್ ಮೊರೆ ಹೋಗಲು ಮುಂದಾಗಿದೆ ಎಂಬ ಲಭ್ಯವಾಗಿದೆ.