alex Certify ಅದ್ಧೂರಿಯಾಗಿ ಮದುವೆಯಾದ ಮರುದಿನವೇ ಯುವತಿಗೆ ಶಾಕ್: ಖಾಸಗಿ ಫೋಟೋ ಕಳಿಸಿದ ಪ್ರಿಯಕರ, ಹೊರಹಾಕಿದ ಗಂಡನ ಮನೆಯವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದ್ಧೂರಿಯಾಗಿ ಮದುವೆಯಾದ ಮರುದಿನವೇ ಯುವತಿಗೆ ಶಾಕ್: ಖಾಸಗಿ ಫೋಟೋ ಕಳಿಸಿದ ಪ್ರಿಯಕರ, ಹೊರಹಾಕಿದ ಗಂಡನ ಮನೆಯವರು

ಬೆಳಗಾವಿ: ಪ್ರೀತಿಸಿದ ಹುಡುಗಿ ಬೇರೆಯವನ ಮದುವೆಯಾಗಿದ್ದಕ್ಕೆ ಪ್ರಿಯಕರ ದುಷ್ಕೃತ್ಯವೆಸಗಿದ್ದು, ಖಾಸಗಿ ಫೋಟೋ ಹರಿಬಿಟ್ಟಿದ್ದಾನೆ.

ಮದುವೆಯಾದ ಮಾರನೇ ದಿನವೇ ಯುವತಿ ಜೀವನ ಹಾಳಾಗಿದೆ. ಇಬ್ಬರು ಜೊತೆಗಿರುವ ಖಾಸಗಿ ಫೋಟೋ ಕಳಿಸಿ ಪ್ರಿಯಕರ ಜೀವನ ಹಾಳು ಮಾಡಿದ ಆರೋಪ ಕೇಳಿ ಬಂದಿದೆ. ವರನ ಅಣ್ಣನ ಫೋನ್ ಗೆ ಫೋಟೋಗಳನ್ನು ಕಳಿಸಲಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಘಟನೆ ನಡೆದಿದೆ.

ಸೋಮವಾರಪೇಟೆ ನಿವಾಸಿ ಮುತ್ತುರಾಜ್ ಇಟಗಿ ಇಂತಹ ಕೃತ್ಯವೆಸಗಿದ್ದಾನೆ. ಆರು ವರ್ಷದಿಂದ ಮುತ್ತುರಾಜ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಆಗುವುದಾಗಿ ನಂಬಿಸಿ ದೈಹಿತ ಸಂಪರ್ಕ ಬೆಳೆಸಿದ್ದ. ಆದರೆ, ಯುವತಿ ಮನೆಯವರು ಬೇರೆಯವನ ಜೊತೆಗೆ ಮದುವೆ ಮಾಡಿದ್ದರು. ಫೆಬ್ರವರಿ 14ರಂದು ಯುವತಿ ಮದುವೆ ಅದ್ದೂರಿಯಾಗಿ ನಡೆದಿತ್ತು.

ಮದುವೆಯಾದ ದಿನವೇ ವರನ ಮನೆಗೆ ಆರೋಪಿ ಹೋಗಿದ್ದ. ವರನ ಅಣ್ಣನ ಫೋನ್ ನಂಬರ್ ಪಡೆದುಕೊಂಡು ಫೋಟೋ ಕಳಿಸಿದ್ದ. ಇದೀಗ ಯುವತಿಯನ್ನು ಪತಿಯ ಮನೆಯವರು ಹೊರಹಾಕಿದ್ದಾರೆ. ನ್ಯಾಯಕ್ಕಾಗಿ ಯುವತಿ ನಿರಂತರವಾಗಿ ಠಾಣೆಗೆ ಅಲೆದಾಡುತ್ತಿದ್ದಾರೆ. ದೂರು ದಾಖಲಿಸಿಕೊಳ್ಳಬೇಕಿದ್ದ ಪೊಲೀಸರು ಸ್ಪಂದಿಸಿಲ್ಲ ಎನ್ನಲಾಗಿದೆ.

ಬೇಸತ್ತು ಯುವತಿ ಪ್ರಿಯಕರನ ಮನೆ ಮುಂದೆ ಧರಣಿ ಕುಳಿತಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...