ಬೆಂಗಳೂರು: ಉರಿಗೌಡ, ನಂಜೇಗೌಡರ ಹೋರಾಟದ ಬಗ್ಗೆ ಬರೆದ ದೇಜಗೌ ಅವರ ‘ಸುವರ್ಣ ಮಂಡ್ಯ’ ಪುಸ್ತಕ ಖರೀದಿಸುತ್ತೇವೆ. ಪುಸ್ತಕಗಳನ್ನು ಮರು ಮುದ್ರಣ ಮಾಡುತ್ತೇವೆ. ಪುಸ್ತಕ ಹಂಚಿ ನಾವು ಮತ ಕೇಳುವುದಿಲ್ಲ, ಓದಲು ಹೇಳುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪುಸ್ತಕ ಭಾಷಾಂತರ ಮಾಡಿ ದೇಶಾದ್ಯಂತ ಹಂಚುವ ಸ್ಥಿತಿ ಬರಬಹುದು. ಮತ್ತೆ ಬಿಜೆಪಿ ಸರ್ಕಾರ ಬಂದಾಗ ಉರಿಗೌಡ, ನಂಜೇಗೌಡರ ಪ್ರತಿಮೆ ಮಂಡ್ಯ ಅಥವಾ ಅವರ ಹುಟ್ಟೂರಿನಲ್ಲಿ ಸ್ಥಾಪಿಸುತ್ತೇವೆ ಎಂದು ಹೇಳಿದ್ದಾರೆ.
ಉರಿಗೌಡ ಮತ್ತು ನಂಜೇಗೌಡ ಇಡೀ ಕರ್ನಾಟಕದ ಸ್ವಾಭಿಮಾನ. ಉರಿಗೌಡ ಮತ್ತು ನಂಜೇಗೌಡರ ಹೋರಾಟದ ಬಗ್ಗೆ ಸುವರ್ಣ ಮಂಡ್ಯ ಎಂಬ ಪುಸ್ತಕ ಬಿಡುಗಡೆಯಾಗಿದೆ. 2006 ರಲ್ಲಿ ದೇವೇಗೌಡರು ಎರಡನೇ ಆವೃತ್ತಿ ಬಿಡುಗಡೆ ಮಾಡಿದ್ದರು. ಆಗ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಹೆಚ್.ಡಿ. ಕುಮಾರಸ್ವಾಮಿ. ಅಂದಿನ ಸಚಿವ ಚೆಲುವರಾಯಸ್ವಾಮಿ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಆಗ ಹೆಚ್.ಡಿ.ಕುಮಾರಸ್ವಾಮಿ ಏಕೆ ಉರಿಗೌಡ, ನಂಜೇಗೌಡರ ಬಗ್ಗೆ ವಿರೋಧಿಸಲಿಲ್ಲ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.