ಬೆಳಗಾವಿ: ತಾಕತ್ತಿದ್ದರೆ ನನ್ನ ವಿರುದ್ಧದ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸಚಿವ ಭೈರತಿ ಸುರೇಶ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಸೋಭಾ ಕರಂದ್ಲಾಜೆ, ಮುಡಾ ಹಗರಣದ ಫೈಲ್ ಗಳನ್ನು ಬೆಂಗಳೂರಿಗೆ ತಂದು ಸಚಿವ ಭೈರತಿ ಸುರೇಶ್ ಅವುಗಳನ್ನು ಸುಟ್ಟು ಹಾಕಿದ್ದಾರೆ. ಅದರ ಬಗ್ಗೆ ನಾನು ಧ್ವನಿ ಎತ್ತಿದ್ದೇನೆ. ಧ್ವನಿ ಎತ್ತಿದ ತಕ್ಷಣ ನನ್ನ ಬಗ್ಗೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ. ಕರಂದ್ಲಾಜೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಗುಡುಗಿದರು.
ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಎ.ಎಸ್.ಪೊನ್ನನ್ಣ ಅವರನ್ನು ನೇಮಕಮಾಡಿದ್ದಾರೆ. ಪೊನ್ನನ್ಣಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ? ಫೇಕ್ ಫೈಲ್ ಕ್ರಿಯೇಟ್ ಮಾಡಲು ಪೊನ್ನಣ್ಣಗೆ ಜವಾಬ್ದಾರಿ ಕೊಡಲಾಗಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಂದು ಪೊನ್ನನ್ನ ಇರುವುದು. ಭೈರತಿ ಸುರೇಶ್ ಮೈಸೂರಿನಿಂದ ಫೈಲ್ ತಂದಿರುವುದೂ ಸತ್ಯ, ಸುಟ್ತಿರುವುದೂ ಸತ್ಯ. ನನ್ನ ವಿರುದ್ಧ ನಿಮ್ಮ ಬಳಿ ದಾಖಲೆಗಳಿದ್ದರೆ ತಕ್ಷಣ ಹೊರ ಹಾಕಿ ಎಂದು ಹೇಳಿದರು.