ಬಿಲ್ವಪತ್ರೆ ಹಿಂದೂಗಳಿಗೆ ಬಹಳ ಪವಿತ್ರವಾದದ್ದು. ಶಿವನ ಪೂಜೆಗೆ ಇದು ಬಹಳ ಮುಖ್ಯ. ಮಳೆಗಾಲದಲ್ಲಿ ಇದರ ಬೇಡಿಕೆ ಜಾಸ್ತಿ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ಭಕ್ತರು ಬಿಲ್ವಪತ್ರೆಯನ್ನು ಬಳಸುತ್ತಾರೆ. ಶಿವ ಪ್ರಿಯ ಬಿಲ್ವಪತ್ರೆ ಔಷಧಿ ಗುಣವನ್ನು ಹೊಂದಿದೆ.
ಜ್ವರಕ್ಕೆ ಪ್ರಯೋಜನಕಾರಿ: ಆಯುರ್ವೇದದ ಪ್ರಕಾರ ಬಿಲ್ವಪತ್ರೆ ಎಲೆಗಳು ಸಾಮಾನ್ಯ ಶೀತ ಮತ್ತು ಜ್ವರಕ್ಕೆ ರಾಮಬಾಣ.
ಹೃದಯ ರೋಗ: ಬಿಲ್ವಪತ್ರೆಯ ಕಷಾಯ ಹೃದಯದ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಅಲ್ಲದೆ ಇದರಿಂದ ಹೃದಯ ಸಂಬಂಧಿ ರೋಗಗಳ ಅಪಾಯ ಕಡಿಮೆ. ಹೃದಯ ಸಂಬಂಧಿ ಸಮಸ್ಯೆಯಿರುವವರು ಇದನ್ನು ಹೆಚ್ಚಾಗಿ ಬಳಸಬೇಕು
ಗುಳ್ಳೆ(ಹುಣ್ಣು)ಗಳಿಂದ ವಿಶ್ರಾಂತಿ: ಕೆಲವೊಮ್ಮೆ ದೇಹದಲ್ಲಿನ ಉಷ್ಣಾಂಶ ಹೆಚ್ಚಾಗಿ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಈ ಹುಣ್ಣುಗಳಿಂದ ಪರಿಹಾರ ಪಡೆಯಲು ಬಿಲ್ಪತ್ರೆಯನ್ನು ಚೆನ್ನಾಗಿ ತೊಳೆದು ಅಗೆಯಿರಿ. ಒಂದೇ ದಿನದಲ್ಲಿ ನೋವು ನೀಡುವ ಹುಣ್ಣು ಮಾಯವಾಗುತ್ತದೆ.
ಮೂಲವ್ಯಾಧಿ: ಬಿಲ್ಪತ್ರೆಯ ಬಳ್ಳಿಯ ತಿರುಳನ್ನು ಕತ್ತರಿಸಿ, ಸಮಾನ ಪ್ರಮಾಣದ ಸಕ್ಕರೆ ಸೇರಿಸಿ ಪುಡಿ ಮಾಡಿ ಬೆಳಿಗ್ಗೆ ಮತ್ತು ಸಂಜೆ ತಣ್ಣೀರಿನೊಂದಿಗೆ ಸೇವಿಸಿ. ಇದು ಮೂಲವ್ಯಾದಿಗೆ ಒಳ್ಳೆ ಔಷಧಿ.