
ಶಿರಸಿ: ಯಲ್ಲಾಪುರದಲ್ಲಿ ಉಪಚುನಾವಣೆ ನಡೆಯುವುದು ನನ್ನ ರಾಜೀನಾಮೆ ಮೇಲೆ ನಿಂತಿದೆ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಮಾತನಾಡಿದ ಅವರು, ಆ ಶಕ್ತಿ, ದೈರ್ಯ ಇದ್ದಾಗ ರಾಜೀನಾಮೆಯಂತಹ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕೆಲ ಪದಾಧಿಕಾರಿಗಳನ್ನು ತೆಗೆದಿದ್ದರು. ಈಗ ವಾಪಸ್ ಅದೇ ಸ್ಥಾನ ನೀಡಲಾಗಿದೆ. ಇದರಿಂದ ಬೇಸರವಾಗಿದೆ. ಪಕ್ಷದ ತೀರ್ಮಾನವಾಗಿದ್ದರಿಂದ ಪ್ರಶ್ನಿಸುವ ಸ್ಥಾನದಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ.
ಪದಾಧಿಕಾರಿ ಹುದ್ದೆಯಿಂದ ತೆಗೆದಿದ್ದು ಏಕೆ? ಮತ್ತೆ ತೆಗೆದುಕೊಂಡಿದ್ದು ಏಕೆ? ಇದನ್ನು ಯಾರು ಮಾಡಿದ್ದಾರೋ ಅವರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಕ್ಷೇತ್ರದ ಜನತೆ ಹೊರತಾಗಿ ನನ್ನನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ನಾನು ಲೀಡರ್ ಬೇಸ್ ರಾಜಕಾರಣಿ ಅಲ್ಲ, ಕೇಡರ್ ಬೇಸ್ ರಾಜಕಾರಣಿ. ಜನ ನನ್ನನ್ನು ಕಡೆಗಣಿಸಬಹುದು. ನಾನು ಯಾವ ನಾಯಕರಿಗೂ ಹೆದರುವುದಿಲ್ಲ. ಬರ ಹಿನ್ನೆಲೆಯಲ್ಲಿ ಈ ಬಾರಿ ಕದಂಬೋತ್ಸವ ನಡೆಸುವ ಸಾಧ್ಯತೆ ಕ್ಷಿಣಿಸಿದೆ. ಅದರ್ಮದ ವಿರುದ್ಧ ಧರ್ಮ, ಅಸತ್ಯದ ವಿರುದ್ಧ ಸತ್ಯಕ್ಕೆ ಜಯ ಸಿಗಬೇಕು ಎಂದು ಹೇಳಿದ್ದಾರೆ.