ಶಿವರಾಜ್‌ಕುಮಾರ್ ಅಭಿನಯದ ಟಗರು ಚಿತ್ರವನ್ನು ಶುಕ್ರವಾರ ಮರು-ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಬಿಡುಗಡೆಯಾಗಿ ಮೂರೂವರೆ ವರ್ಷಗಳಾದ ಬಳಿಕವೂ ಸಹ ಶಿವಣ್ಣನೊಂದಿಗೆ, ಧನಂಜಯ್, ವಸಿಷ್ಠ ಎನ್ ಸಿಂಹ, ಮನ್ವಿತಾ ಕಾಮತ್ ಹಾಗೂ ಭಾವನಾ ಮುಖ್ಯ ಪಾತ್ರಗಳಲ್ಲಿ ಅಭಿನಿಯಿಸಿರುವ ಈ ಚಿತ್ರದ ಕಥೆ ಹಾಗೂ ಸಾಹಸ ದೃಶ್ಯಗಳು ಚಿತ್ರ ಪ್ರಿಯರಿಗೆ ಇನ್ನೂ ಇಷ್ಟವಾಗುತ್ತಿದೆ.
ಸಹೋದರನಿಂದಲೇ ಅತ್ಯಾಚಾರ ಆರೋಪ ಮಾಡಿದ್ದ ಹುಡುಗಿ 2 ವರ್ಷದ ನಂತ್ರ ಹೇಳಿಕೆ ಬದಲಿಸಿದ್ಲು
’ಕಡ್ಡಿಪುಡಿ’ ಬಳಿಕ ಎರಡನೇ ಬಾರಿಗೆ ಕೈಜೋಡಿಸಿರುವ ಶಿವರಾಜ್ ಕುಮಾರ್ ಹಾಗೂ ನಿದೇರ್ಶಕ ದುನಿಯಾ ಸೂರಿ ’ಟಗರು’ ಚಿತ್ರ ಮಾಡಿದ್ದಾರೆ. ಬೆಂಗಳೂರಿನ ಕ್ರೈಂ ಜಗತ್ತನ್ನೇ ಪ್ರಧಾನ ಥೀಂ ಆಗಿ ಮಾಡಿಕೊಂಡಿರುವ ಈ ಚಿತ್ರದ ಸಾಹಸ ದೃಶ್ಯಗಳು, ಬಿಗಿಯಾದ ನಟನೆ ಹಾಗೂ ತಾರಾಗಣದ ಪರಿಶ್ರಮಕ್ಕೆ ಒಳ್ಳೆ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.