ಬೆಂಗಳೂರು : ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಲದ (KMF) ಉತ್ಪನ್ನಗಳಿಗೆ ರಾಯಭಾರಿಯಾಗಲು ನಟ ಡಾ. ಶಿವರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ.
ಹೌದು. ಕೆಎಂಎಫ್ ಮನವಿಗೆ ಸ್ಪಂದಿಸಿ ನಂದಿನಿ ಉತ್ಪನ್ನಗಳ ರಾಯಭಾರಿ ಆಗಲು ನಟ ಶಿವರಾಜ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನೂತನ ರಾಯಭಾರಿಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೂಗುಚ್ಚ ನೀಡಿ ಸ್ವಾಗತ ಕೋರಿದ್ದಾರೆ.
ಈ ಹಿಂದೆ ನಂದಿನಿ ಹಾಲಿಗೆ ಪ್ರಚಾರಕರಾಗಿದ್ದವರು ದಿವಂಗತ ನಟ ಡಾ ರಾಜ್ಕುಮಾರ್. ಬಳಿಕ ದಿವಂಗತ ನಟ ಪುನೀತ್ ರಾಜಕುಮಾರ ಅವರು ಆಗಿದ್ದರು. ಸರ್ಕಾರ ರಾಜ್ಕುಮಾರ್ ಪುನೀತ್ ರಾಜ್ಕುಮಾರ್ ಅವರನ್ನು ಕೆಎಂಎಫ್ನ ರಾಯಭಾರಿ ಮಾಡಿದ್ದರು. ಕೆಎಂಎಫ್ ಸಂಸ್ಥೆಯು ಹಾಲು, , ಐಸ್ ಕ್ರೀಮ್, ಬೆಣ್ಣೆ, ಮೊಸರು, ತುಪ್ಪ ಕೆಲವು ಸಿಹಿತಿಂಡಿಗಳಾದ ಕಾಜು, ಮೈಸೂರ್ ಪಾಕ್, ಪೇಡ ಹೀಗೆ ಹಲವಾರು ಪದಾರ್ಥಗಳನ್ನು ತಯಾರಿಸುತ್ತದೆ. 1974ರಲ್ಲಿ ಕೆಎಂಎಫ್ ಸಂಸ್ಥೆ ಸ್ಥಾಪನೆಯಾಗಿತ್ತು. ಸದ್ಯ. ಸೆಂಚುರಿ ಸ್ಟಾರ್ ನಟ ಶಿವರಾಜ್ ಕುಮಾರ್ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ.