
ಕೊಪ್ಪಳ: ಬಿಜೆಪಿಯಲ್ಲಿ ಎಂಎಲ್ಎ ಟಿಕೆಟ್ ಗಾಗಿ ಕೋಟಿ ಕೋಟಿ ಡೀಲ್ ವಿಚಾರವಾಗಿ ವ್ಯಂಗ್ಯವಾಡಿರುವ ಸಚಿವ ಶಿವರಾಜ್ ತಂಗಡಗಿ, ಬಿಜೆಪಿಯಲ್ಲಿ ಎಲ್ಲಾ ಹುದ್ದೆಗಳು ಡೀಲ್ ಆಗಿವೆ. ಶಾಸಕ ಯತ್ನಾಳ್ ಹೇಳಿದ್ದು ಈಗ ನಿಜ ಅನಿಸುತ್ತಿದೆ ಎಂದು ಟಾಂಗ್ ನೀಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಬಿಜೆಪಿಯಲ್ಲಿ ಎಲ್ಲಾ ಹುದ್ದೆಗಳು ಡೀಲ್ ಆಗಿವೆ. ವಿಪಕ್ಷ ಸ್ಥಾನಕ್ಕಾಗಿ ಟೆಂಡರ್ ಕರೆಯುವುದು ಬಾಕಿಯಿದೆ. ಟೆಂಡರ್ ಹೇಗೆ ಕರೆಯುತ್ತಾರೆ ಗೊತ್ತಿಲ್ಲ, ಟೆಂಡರ್ ನಲ್ಲಿ ಜೆಡಿಎಸ್ ನವರು ಭಾಗವಹಿಸಬಹುದು. ಯಾರು ಹೆಚ್ಚು ದುಡ್ದಿಗೆ ಬಿಡ್ ಮಾಡ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಈಗ ಎಂಎಲ್ಎ ಟಿಕೆಟ್ ಡೀಲ್ ಆಗಿದೆ. ಮುಂದೆ ಎಂಪಿ ಟಿಕೆಟ್ ಕೂಡ ಇದೇ ರೀತಿ ಡೀಲ್ ಆಗುತ್ತೆ. ಹಿಂದೆ ಯತ್ನಾಳ್ ಅವರು ಹೇಳಿದ್ದು ಇವಾಗ ನಿಜ ಅನಿಸುತ್ತಿದೆ. ಎಂಎಲ್ಎ ಟಿಕೆಟ್ ಗೆ 5ರಿಂದ 7 ಕೋಟಿ, ಮಂತ್ರಿಗಿರಿಗೆ 50ರಿಂದ 70 ಕೋಟಿ, ಸಿಎಂ ಹುದ್ದೆಗೆ 2000 ಕೋಟಿಗೆ ಫಿಕ್ಸ್ ಆಗಿದೆ ಎಂದು ಹೇಳಿದ್ದಾರೆ.