![](https://kannadadunia.com/wp-content/uploads/2023/08/Shivaraj-Thangadagi.jpg)
ಕೊಪ್ಪಳ: ಮಾಜಿ ಶಾಸಕ ಬಸವರಾಜ್ ದಡೇಸೂಗೂರು ಸಚಿವ ಶಿವರಾಜ್ ತಂಗಡಗಿ ಹಾಗೂ ಸಹೋದರರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿವರಾಜ್ ತಂಗಡಗಿಯದ್ದು ಕನಕಗಿರಿ ಕ್ಷೇತ್ರದಲ್ಲಿ ಇಸ್ಪೀಟ್ ಆಡುವುದೇ ಸಾಧನೆ ಎಂದು ಆರೋಪಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡಿದ ಬಸವರಾಜ್ ದಡೇಸೂಗೂರು, ಕ್ಷೇತ್ರದಲ್ಲಿ 500 ಕಡೆ ಅಕ್ರಮವಾಗಿ ಇಸ್ಪೀಟ್, ಜೂಜು ನಡೆಸುತ್ತಿದ್ದಾರೆ. ಇಸ್ಪೀಟ್ ದಂಧೆಯಲ್ಲಿ ಸಚಿವರ ಸಹೋದರರೇ ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ಮರಳು ಪಾಯಿಂಟ್ ಗೂ ಲಂಚ ಪಡೆಯುತ್ತಿದ್ದಾರೆ. ಪ್ರತಿ ಲೀಗಲ್ ಮರಳು ಪಾಯಿಂಟ್ ನಲ್ಲಿಯೂ ಸಚಿವರು 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನರು ನನ್ನ ಬಳಿ ಬಂದು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.