ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್, ಸೋಲನುಭವಿಸಿದ್ದು, ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ನೂತನ ಸಂಸದರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ನಟ ಶಿವರಾಜ್ ಕುಮಾರ್, ಸೋಲಿನ ಬಗ್ಗೆ ನಾನೇನೂ ಹೇಳಲ್ಲ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಶಿವರಾಜ್ ಕುಮಾರ್, ಶಿವಮೊಗ್ಗದಲ್ಲಿ ನಾವು ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ಸಾಧ್ಯವಾಗಿಲ್ಲ. ಯಾರಾದರೂ ಒಬ್ಬರು ಗೆಲ್ಲಬೇಕಿತ್ತು ಗೆದ್ದಿದ್ದಾರೆ ಎಂದರು.
ಒಳ್ಳೆಯ ಕೆಲಸಗಳು ಆಗಬೇಕು. ಜನರಿಗೆ ಅನುಕೂಲವಾಗಬೇಕು. ಅದು ಯಾರು ಮಾಡಿದರೇನು? ನಮಗೆ ಯಾರೂ ಶತ್ರುಗಳಿಲ್ಲ ಎಂದು ಹೇಳಿದರು.