ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಕಲ್ಲು ತೂರಾಟ ಗಲಾಟೆ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ಗೆ ಆವಾಜ್ ಹಾಕಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸಲೀಂ ಬಂಧಿತ ಆರೋಪಿ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು. ಪೊಲೀಸರ ಮೇಲೆ, ಹಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಘಟನೆಯಲ್ಲಿ 7 ಜನರು ಗಾಯಗೊಂಡಿದ್ದರು.
ಗಲಾಟೆ ನಿಯಂತ್ರಿಸಲು ಹೋಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಹರೀಶ್ ಪಟೇಲ್ ಅವರಿಗೆ ಆವಾಜ್ ಹಾಕಿದ್ದ ವ್ಯಕ್ತಿಯೊಬ್ಬ ಒಂದು ನಾವು ಸಾಯಬೇಕು ಇಲ್ಲ ಅವರು ಸಾಯಬೇಕು. ನಾವು ಹೇಗೆ ಅಂತಾ ಗೊತ್ತಿಲ್ಲ… ಎಂದು ಕೂಗಾಡಿದ್ದ. ಆವಾಜ್ ಹಾಕಿದ್ದ ಸಲಿಂ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.