
ಶಿವಮೊಗ್ಗ: ಪ್ರೀತಿಸಿ ವಿವಾಹವಾದ 7 ತಿಂಗಳಲ್ಲೇ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹರಿಗೆ ಗ್ರಾಮದಲ್ಲಿ ನಡೆದಿದೆ.
22 ವರ್ಷದ ನಮಿತಾ ಮೃತ ಮಹಿಳೆ. ಗಣೇಶ ಹಬ್ಬಕ್ಕೆಂದು ನಿನ್ನೆ ತವರು ಮನೆಗೆ ಬಂದಿದ್ದವಳನ್ನು ತಡರಾತ್ರಿ ಪತಿ ಸತೀಸ್, ಮನೆಗೆ ವಾಪಸ್ ಕರೆದೊಯ್ದಿದ್ದ. ಬಳಿಕ ಏನಾಗಿದೆ ಎಂಬುದು ಗೊತ್ತಿಲ್ಲ. ಮೆಗ್ಗಾನ್ ಆಸ್ಪತ್ರೆಗೆ ದಾಖಲಾದವಳು ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಹಬ್ಬಕ್ಕೆಂದು ಶಿವಮೊಗ್ಗದ ಶಾರದಾ ನಗರದಲ್ಲಿರುವ ತವರು ಮನೆಗೆ ನಮಿತಾ ಬಂದಿದ್ದಳು. ಆದರೆ ಪತಿ, ತಡರಾತ್ರಿ 11:30ರ ಸುಮಾರಿಗೆ ಪತ್ನಿಯನ್ನು ಶಿವಮೊಗ್ಗ ತಾಲೂಕಿನ ಹರಿಗೆ ಗ್ರಾಮದ ತನ್ನ ಮನೆಗೆ ಕರೆದೊಯ್ದಿದ್ದ. ಬಳಿಕ ಮಧ್ಯರಾತ್ರಿ 12:15ಕ್ಕೆ ನಮಿತಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಪತಿ-ಪತ್ನಿ ನಡುವೆ ಗಲಾಟೆಯಾಗಿತ್ತು. ತಡರಾತ್ರಿ ತವರಿನಿಂದ ಪತ್ನಿಯನ್ನು ಮನೆಗೆ ಕರೆದೊಯ್ದು ಪತಿಯೇ ಹತ್ಯೆ ಮಾಡಿದ್ದಾನೆ ಎಂದು ನಮಿತಾ ಕುಟುಂಬದವರು ಆರೋಪಿಸಿದ್ದಾರೆ. ಒಟ್ಟಾರೆ ನವವಿವಾಹಿತೆ ಸಾವು ಅನುಮಾನಕ್ಕೆ ಕರಣವಾಗಿದೆ.