ಶಿವಮೊಗ್ಗ: ಪಂಪ್ಸೆಟ್ ಸ್ವಿಚ್ ಆಫ್ ಮಾಡಲು ಹೋಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕನಸಿನಕಟ್ಟೆಯಲ್ಲಿ ನಡೆದಿದೆ.
ದರ್ಶನ್(20) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ನೀರು ಹಾಯಿಸಲು ತೋಟಕ್ಕೆ ಹೋಗಿದ್ದ ದರ್ಶನ್ ಪಂಪ್ಸೆಟ್ ಸ್ವಿಚ್ ಆಫ್ ಮಾಡುವಾಗ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ. ಅಕ್ಕ ಪಕ್ಕದ ಜಮೀನಿನವರು ಇದನ್ನು ಗಮನಿಸಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.