alex Certify ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಮಹಿಳೆ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಮಹಿಳೆ ಸಾವು

ಶಿವಮೊಗ್ಗ: ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ನಡೆದಿದೆ.

50 ವರ್ಷದ ಗಂಗೀಬಾಯಿ ಮೃತಪಟ್ಟ ಮಹಿಳೆ. ಈ ಸಾಕು ಬೆಕ್ಕು ಮೊದಲಿಗೆ ತರಲಘಟ್ಟದ ಕ್ಯಾಂಪ್ ನಲ್ಲಿರುವ ಯುವಕನೊಬ್ಬನ ಮೇಲೆ ದಾಳಿ ಮಾಡಿದ್ದು, ನಂತರ ಗಂಗೀಬಾಯಿಗೆ ಕಚ್ಚಿತ್ತು. ಇದರ ಪರಿಣಾಮ ಗಂಗೀಬಾಯಿ ರೇಬಿಸ್ ಕಾಯಿಲೆಗೆ ತುತ್ತಾಗಿದ್ದರು. ಆದರೆ, ಸರಿಯಾಗಿ ಔಷಧ ಪಡೆಯದೆ ಕೇವಲ ಒಂದೇ ಒಂದು ಚುಚ್ಚುಮದ್ದು ಪಡೆದುಕೊಂಡಿದ್ದ ಅವರು ನಿರ್ಲಕ್ಷ್ಯ ವಹಿಸಿದ್ದರು.

ನಾಟಿ ಮಾಡಲು ಹೋಗಿದ್ದಾಗ ನೀರಿಗೆ ಇಳಿದ ಬಳಿಕ ರೇಬಿಸ್ ನಿಂದಾಗಿ ಅನಾರೋಗ್ಯ ಕಾಡಿದೆ. ರೇಬಿಸ್ ಲಕ್ಷಣಗಳು ಕಾಣಿಸಿಕೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...