
ನವದೆಹಲಿ: ಶಿವಮೊಗ್ಗದಲ್ಲಿ ಐಎಸ್ ಐಎಸ್ ನಿಂದ ಟ್ರಯಲ್ ಬ್ಲಾಸ್ಟ್ ಪ್ರಕರಣ, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ್ದ ಕಿಂಗ್ ಪಿನ್ ಅರಾಫತ್ ಅಲಿಯನ್ನು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ ಐಎ ಪೊಲೀಸರು ಬಂಧಿಸಿದ್ದಾರೆ.
ನೈರೋಬಿಯಿಂದ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅರಾಫತ್ ಅಲಿಯನ್ನು ಎನ್ ಐ ಎ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾಗಿದ್ದ ಆರೋಪಿ ಅರಾಫತ್ ಅಲಿ, ನೇರವಾಗಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗದೇ ವಿದೇಶಗಳಲ್ಲಿ ಕುಳಿತು ಹಣದ ವ್ಯವಸ್ಥೆ ಮಾಡುತ್ತಿದ್ದ.
2020ರಿಂದ ಈತ ತಲೆಮರೆಸಿಕೊಂಡಿದ್ದ. ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜೊತೆ ಈತನೂ ನಾಪತ್ತೆಯಾಗಿದ್ದ. ಇದೀಗ ದೆಹಲಿ ವಿಮಾನ ನಿಲ್ದಾಣದಲ್ಲಿ ಅರಾಫತ್ ಅಲಿಯನ್ನು ಬಂಧಿಸಲಾಗಿದೆ.