![](https://kannadadunia.com/wp-content/uploads/2019/04/Emergency-Sign.vu_.jpg)
ಶಿವಮೊಗ್ಗ: ರೈಲು ಹತ್ತುವಾಗ ಆಯತಪ್ಪಿ ಬಿದ್ದು ಯುವಕನ ಕಾಲು ತುಂಡಾದ ಘಟನೆ ಸಾಗರದ ತಾಳಗುಪ್ಪ ರೈಲು ನಿಲ್ದಾಣದಲ್ಲಿ ಸೋಮವಾರ ರಾತ್ರಿ ನಡೆದಿದೆ.
ತಾಳಗುಪ್ಪ -ಬೆಂಗಳೂರು ರೈಲು ಹತ್ತುವ ಸಂದರ್ಭದಲ್ಲಿ ಯುವಕ ಆಯತಪ್ಪಿ ಬಿದ್ದಿದ್ದಾನೆ. ಸಿದ್ದಾಪುರ ತಾಲೂಕಿನ ಕವಚೂರಿನ ನವೀನ್(19) ಗಾಯಗೊಂಡ ಯುವಕ ಎಂದು ಹೇಳಲಾಗಿದೆ. ಬೆಂಗಳೂರಿಗೆ ತೆರಳುತ್ತಿದ್ದ ನವೀನ್ ರೈಲು ಹತ್ತುವ ವೇಳೆ ಆಯತಪ್ಪಿ ಬಿದ್ದು ಕಾಲು ತುಂಡಾಗಿದೆ. ಕೈಗೆ ಗಂಭೀರ ಗಾಯಗಳಾಗಿದ್ದು, ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.