alex Certify ಶಿವಮೊಗ್ಗ ಉದ್ವಿಗ್ನ: ಬೈಕ್ ಹಿಂಬದಿ 40 ವರ್ಷದೊಳಗಿನ ಪುರುಷರ ಸಂಚಾರ ನಿಷೇಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ ಉದ್ವಿಗ್ನ: ಬೈಕ್ ಹಿಂಬದಿ 40 ವರ್ಷದೊಳಗಿನ ಪುರುಷರ ಸಂಚಾರ ನಿಷೇಧ

ಶಿವಮೊಗ್ಗ: ವೀರ ಸಾವರ್ಕರ್‌ ಫೊಟೋ ಅಳವಡಿಸುವ ವಿವಾದದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಆ. 15 ರ ಮದ್ಯಾಹ್ನ 3 ಗಂಟೆಯಿಂದ ಆ. 18 ರಂದು ರಾತ್ರಿ 10 ಗಂಟೆಯವರೆಗೆ ಈ ಕೆಳಕಂಡ ನಿಭಂದನೆಗಳನ್ನು ವಿಧಿಸಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿರುತ್ತದೆ.

5 ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿರ್ಬಂಧಿಸಿದೆ.

ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇದಿಸಲಾಗಿದೆ.

ಯಾವುದೇ ರೀತಿ ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಾಗೂ ಸ್ಪೋಟಕಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಸಂಗ್ರಹಿಸುವುದು ನಿಷೇಧಿಸಲಾಗಿದೆ.

ವ್ಯಕ್ತಿ /ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ /ದಹನ ಮಾಡುವುದು ಮತ್ತು ಪ್ರಚೋದನಕಾರಿ ಘೋಷಣೆ ಹಾಗೂ ಭಿತ್ತಿಚಿತ್ರಗಳನ್ನು ತೋರಿಸುವುದು ನಿಷೇಧಿಸಲಾಗಿದೆ.

ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನ ಗಂಡಸರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇದಿಸಲಾಗಿದೆ.(40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತುಪಡಿಸಿ)

ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ.(ತುರ್ತು ಸಂದರ್ಭವನ್ನು ಹೊರತುಪಡಿಸಿ).

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Marie Kondo je Jak na dokonalý úklid: Triky, co vám ulehčí život Ekologické čištění: Jak na čistý Organizace domácnosti jako základ klidné mysli: Triky, které ti Jak udržovat čistotu s minimálním úsilím: Jak provést ekologické