
ಶಿವಮೊಗ್ಗ: ನಿಷೇಧಾಜ್ಞೆ ಅವಧಿ ಸಡಿಲಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ತಿಳಿಸಿದ್ದಾರೆ. ಇಂದಿನಿಂದ ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಅವಧಿ ಸಡಿಲಿಕೆ ಮಾಡಲಾಗಿದೆ. ಆದರೆ ಮದ್ಯದ ಅಂಗಡಿಗಳನ್ನು ಮಾತ್ರ ಸಂಜೆ 7 ಗಂಟೆಯೊಳಗೆ ಮುಚ್ಚಲು ಆದೇಶಿಸಲಾಗಿದೆ.
ಫೆಬ್ರವರಿ 21 ರಿಂದ ಇಂದಿನವರೆಗೆ ಜಾರಿಗೊಳಿಸಲಾಗಿದ್ದ ನಿಷೇದಾಜ್ಞೆಯನ್ನು ತೆರವುಗೊಳಿಸಲಾಗಿದೆ. ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ನಂತರ ನಡೆದ ಗಲಾಟೆ, ಹಿಂಸಾಚಾರಗಳ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಿಷೇಧಾಜ್ಞೆ ಸಡಿಲಿಕೆ ಮಾಡಿದ್ದರೂ, ಸಂಜೆ 7 ಗಂಟೆಯ ಒಳಗೆ ಮದ್ಯದಂಗಡಿ ಮುಚ್ಚಬೇಕಿದೆ ಎಂದು ಹೇಳಲಾಗಿದೆ.