
ಶಿವಮೊಗ್ಗ: ಯುಗಾದಿ ಪ್ರಯುಕ್ತ ಶಿವಮೊಗ್ಗದಲ್ಲಿ ಆರ್.ಎಸ್.ಎಸ್ ನಿಂದ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹಾಗೂ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮುಖಾಮ್ಮುಖಿಯಾಗಿದ್ದಾರೆ.
ಒಂದೇ ಕಾರ್ಯಕ್ರಮದಲ್ಲಿ ಮುಖಾಮುಖಿಯಾದರೂ ಪರಸ್ಪರ ಮಾತನಾಡಿಲ್ಲ. ರಾಘವೇಂದ್ರ ಕಾರ್ಯಕ್ರಮದ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರೆ, ಈಶ್ವರಪ್ಪ ಹಿಂಭಗದ ಸಾಲಿನಲ್ಲಿ ಗಂಭೀರ ಮುಖಮುದ್ರೆಯೊಂದಿಗೆ ಕುಳಿತಿದ್ದಾರೆ.
ತಮ್ಮ ಮಗ ಕಾಂತೇಶ್ ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಇಬ್ಬರೂ ಮುಖಾಮುಖಿಯಾದರೂ ಪರಸ್ಪರ ಶುಭಾಷಯಗಳನ್ನೂ ಕೋರಿಲ್ಲ ಎನ್ನಲಾಗಿದೆ.